ಐರಾ ಗೆ ತನ್ನ ತಂದೆ ಮೇಲೆ ಕೋಪ......!

ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಳ ಮುಡಿ ತೆಗೆಸಿದ್ದಾರೆ.  ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿ ಹರಕೆ ತೀರಿಸಿದರು. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ದೇವರಿಗೆ ವಂದಿಸಿದರು.

ಯಶ್, ಐರಾ ಜೊತೆಗಿರುವ ಫೋಟೋವೊಂದನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಐರಾ ತನ್ನ ತಂದೆಯನ್ನು ಕೋಪದಿಂದ ನೋಡುತ್ತಿದ್ದಾಳೆ. ಯಶ್ ಈ ಫೋಟೋ ಹಾಕಿ ಅದಕ್ಕೆ, "ಐರಾ: ಅಪ್ಪ ಈಗ ಸಮ್ಮರ್ ಎಂದು ನನಗೆ ಗೊತ್ತು. ಆದರೆ ಇದು ಸಮ್ಮರ್ ಕಟ್ ಅಲ್ಲ ಎಂದು ನನಗೆ ಪಕ್ಕಾ ತಿಳಿದಿದೆ. ಅಪ್ಪ: ಸರಿ" ಎಂದು ಫನ್ನಿ ಕ್ಯಾಪ್ಷನ್ ನೀಡಿದ್ದಾರೆ

ಯಶ್ ಅವರ ಪೋಸ್ಟ್ ಗೆ ಅಭಿಮಾನಿಗಳು ಭರ್ಜರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳು ಐರಾಳ ಮುಡಿ ತೆಗೆಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.