ನಿರ್ದೇಶಕ ರಾಜ್ ಪಂಡಿತ್ ಮೌನಂ ಮಾತಾಗುವ ಹೊತ್ತು

ಸಿನಿಮಾ ಮಾಡಬೇಕು ಎಂಬ ಕನಸನ್ನು ಹೊತ್ತು, ದೂರದಬೀದರ್ ನಿಂದ ಬೆಂಗಳೂರಿಗೆ ಬಂದ ರಾಜ್ ಪಂಡಿತ್ ಮನದ ಅಂತರಾಳದ ಕಥೆಯನ್ನು ಮೌನವಾಗಿ, ನಿರ್ದೇಶಿಸಿದ ಮೌನಂ ಚಿತ್ರದ ಮೋಷನ್ ಪೋಸ್ಟರ್ ಸದ್ಯ ಬಿಡುಗಡೆಯಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ಮೌನಂ ತೆರೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ

.

ನಾಯಕನಟಿ: ಮಯೂರಿ

ಈ ಚಿತ್ರದಲ್ಲಿ ಮುಖ್ಯವಾಗಿ ಕೃಷ್ಣಲೀಲಾ’ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಕದ ತಟ್ಟಿ, ಒಂದಷ್ಟು ಭರವಸೆ ಮೂಡಿಸಿದ್ದ ನಟಿ ಮಯೂರಿ ನಾಯಕಿಯಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಹಿರಿಯ ನಟ ಅವಿನಾಶ್‌ ಕೂಡ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಟವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ನಟ: ಅವಿನಾಶ್ 

ಹಾಗೆ ಮೌನಂ’ ಚಿತ್ರದಲ್ಲಿ ಅಮೃತವರ್ಷಿಣಿ ಖ್ಯಾತಿಯ ಬಾಲಾಜಿ ಶರ್ಮ ನಾಯಕನಟನಾಗಿ ನಟಿಸಿದ್ದಾರೆ, ಉಳಿದಂತೆ ಹನುಮಂತೇಗೌಡ, ರಿತೇಶ್‌, ಕೆಂಪೇಗೌಡ, ಗುಣವಂತ ಮಂಜು, ನಯನ, ಸಿಂಚನ, ಮಂಜುಳಾ ರೆಡ್ಡಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನಾಯಕ ನಟ: ಬಾಲಾಜಿ ಶರ್ಮಾ

“ನಿಹಾರಿಕಾ ಮೂವೀಸ್‌’ ಬ್ಯಾನರ್‌ನಲ್ಲಿ ಶ್ರೀಹರಿ ನಿರ್ಮಿಸಿರುವ ಚಿತ್ರಕ್ಕೆಛಾಯಾಗ್ರಹಕ ಶಂಕರ್‌ ಕೈ ಚಳಕ ವಿದ್ದರೆ, ಗುರುಮೂರ್ತಿ ಹೆಗಡೆ ಸಂಕಲನ ಕಾರ್ಯವಿದೆ.

ನಿರ್ಮಾಪಕ: ಶ್ರೀಹರಿ 

ಚಿತ್ರದ ಹಾಡುಗಳಿಗೆ ಆರವ್‌ ರಿಶಿಕ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಬಿಡುಗಡೆಯಾಗಲಿವೆ. ಅಂದಹಾಗೆ, ಮನುಷ್ಯನಿಗೆ ಮನುಷ್ಯನೇ ಶತ್ರು. ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಎಳೆಯೇ “ಮೌನಂ’ ಚಿತ್ರದ ಕಥಾಹಂದರ ಎನ್ನುತ್ತಾರೆ ಚಿತ್ರತಂಡ.