ದುರ್ಗಕ್ಕೀಗ ಪೊಲೀಸ್‌ ಭದ್ರತೆ : ಸಕ್ರೀಯವಾದ ನಿರ್ಭಯ ಯೋಜನೆ

ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು  ಹಾಗೂ ಜನರಿಗೆ ಹೆಚ್ಚಿನ ಭದ್ರತೆ ಒದಗಿಸಲು ಪೊಲಿಸ್‌ ಇಲಾಖೆ ಮುಂದಾಗಿದೆ.  ಜನರ ಅಪಹರಣ , ಕಳ್ಳತನ ,ಅಮಾಯಕ ಮಹಿಳೆಯೆರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು  ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ಪೋಲಿಸರು ಸಜ್ಜಾಗಿದ್ದಾರೆ.  

ಆರಕ್ಷಕರು ಬೈಕ್ ಗಳಲ್ಲಿ ರಸ್ತೆಗಿಳಿದು ಜನ ಸಾಮಾನ್ಯರ ಕಾವಲಿಗೆ ನಿಂತಿದ್ದಾರೆ. ಪೋಲಿಸರು ಜಿಲ್ಲೆಯ ಸುತ್ತ  ಓಡಾಟವನ್ನು ನಡೆಸುವ ಮೂಲಕ ಜನರಿಗೆ ಆಗುತ್ತಿರುವ ಅನಾಹುತವನ್ನು ತಪ್ಪಿಸುತ್ತಿದ್ದಾರೆ.

ಕೋಟೆ ನಾಡು ಚಿತ್ರದುರ್ಗದಲ್ಲಿ, ಮಕ್ಕಳು ಹಾಗು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಲ್ಲೆ ಮಾಡುವವರ ವಿರುದ್ಧ ಯಾರು ಸಹ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಚಿತ್ರದುರ್ಗ ಜಿಲ್ಲಾ ಪೋಲಿಸರು ನೂತನವಾದ ಯೋಜನೆ ಜಾರಿಗೆ ತಂದಿದ್ದಾರೆ.  ರಾತ್ರಿ ವೇಳೆ ರಸ್ತೆಗಳಲ್ಲಿ ಓಡಾಡುವ ಅನಾಥ ಮಕ್ಕಳು, ಯುವತಿಯರ ರಕ್ಷಣೆಗೆಂದೇ ಪೊಲೀಸ್‌ ಇಲಾಖೆ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಿದ್ದು , ಇಂತಹವರ ರಕ್ಷಣೆಗಾಗಿ ಬೆಂಗಾವಲಾಗಿ ನಿಂತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಿರ್ಭಯ ಯೋಜನೆಯಡಿಯಲ್ಲಿ ಕೋಟೆ ನಾಡಿನ ಪೋಲಿಸ್‌ ಠಾಣೆಗೆ ಹೊಸದಾಗಿ 23 ಬೈಕ್‌ ಗಳು ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಸುಮಾರು 22 ಪೋಲಿಸ್‌ ಠಾಣೆಗಳಿಗೆ ಒಂದು ಬೈಕ್‌ ಹಾಗು ಮಹಿಳಾ ಪೋಲಿಸ್‌ ಠಾಣೆಗಳಿಗೆ 2 ಬೈಕ್‌ ಗಳನ್ನು ಸರ್ಕಾರ ಒದಗಿಸಿದೆ. ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯದ ಘಟನೆಗಳು ನಡೆದರೆ, ಇವರ ಅಸಾಹಯಕತೆಯ ಕೂಗು ಕೇಳಿ ಬಂದ ಕೂಡಲೇ ಆರಕ್ಷಕರು ಸ್ಥಳಕ್ಕೆ ದೌಡಾಯಿಸಿ ಜನರನ್ನು ಕಾಪಾಡುತ್ತಾರೆ.  ಪೋಲಿಸರು ನೀಡಿರುವ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಂಡು, ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಬೇಕೆಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.