ವಿದೇಶದಿಂದ ಬೆಂಗಳೂರಿಗೆ ಬಂದವರ ಪತ್ತೆಗೆ ಬಿಬಿಎಂಪಿ ಕಡೆಯಿಂದ 500 ಜನರ ತಂಡ...

ಬೆಂಗಳೂರುನ ಕೊರೊನಾ ಹರಡುವುದನ್ನು ತಡೆಯಲು ಬಿಬಿಎಂಪಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದೇಶದಿಂದ ಬಂದವರನ್ನು ಪತ್ತೆ ಹಚ್ಚಲು 500 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 30 ಸಾವಿರ ಜನರು ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಈಗ ಅವರ ಮನೆಗೆ ಭೇಟಿ ನೀಡಿ home quarantineನಲ್ಲಿರಬೇಕು ಎಂದು ಸೂಚನೆ ನೀಡಲಾಗುತ್ತಿದೆ.

ಆರೋಗ್ಯ ಇಲಾಖೆ, ಬಿಬಿಎಂಪಿ, ಬೆಂಗಳೂರು ಪೊಲೀಸರು ಸೇರಿ ಬೆಂಗಳೂರಿಗೆ ಆಗಮಿಸಿದ ವಿದೇಶಿಯರನ್ನು ಹುಡುಕುತ್ತಿದ್ದಾರೆ. ನಗರಕ್ಕೆ ಬಂದವರ ಮನೆಗೆ ಭೇಟಿ ನೀಡಿ home quarantineಗೆ ಕಡ್ಡಾಯವಾಗಿ ಒಳಪಡಬೇಕು ಎಂದು ಸೀಲ್ ಹಾಕಿ ಬರುತ್ತಿದ್ದಾರೆ.

home quarantine ಸೀಲ್ ಕೈಯಲ್ಲಿ ಇರುವವರು ನಿಮ್ಮ ಬಡಾವಣೆಗಳಲ್ಲಿ ಓಡಾಡುತ್ತಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದೆ. home quarantine ತಪ್ಪಿಸಿ ಹೊರ ಬಂದರೆ ಅವರನ್ನು ಸಮೀಪದ quarantine ವ್ಯವಸ್ಥೆ ಇರುವ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.

ಒಬ್ಬರು ಕ್ಯಾನಿನೆಟ್ ದರ್ಜೆ ಸಚಿವರು, ಒಬ್ಬರು ಐಎಎಸ್ ಅಧಿಕಾರಿ ನೇತೃತ್ವದ ಟಾಸ್ಕ್‌ ಪೋರ್ಸ್‌ಗೆ ತಂಡ ಮಾಹಿತಿಗಳನ್ನು ನೀಡುತ್ತಿದೆ. ಬಿಬಿಎಂಪಿ ಮೇಯರ್ ಮತ್ತು ಆಯುಕ್ತರು ಸಹ ಮಾಹಿತಿಗಳನ್ನು ಪಡೆಯುತ್ತಿರುತ್ತಾರೆ.