ಕರೋನಾ ಬಿಕ್ಕಟ್ಟು: ನೌಕರರ ವೇತನ ಕಡಿತಗೊಳಿಸದಿರಲು ಕಂಪನಿಗಳಿಗೆ ಸರ್ಕಾರದ ಸೂಚನೆ...

ಕರೋನಾ ಬಿಕ್ಕಟ್ಟಿನಿಂದಾಗಿ ಕೆಲಸಕ್ಕೆ ಬರಲು ಆಗದೇ ಇರುವ ನೌಕರರನ್ನು ಕೆಲಸದಿಂದ ತೆಗೆದು ಹಾಕದಂತೆ ಹಾಗೂ ಸಂಬಳವನ್ನು ಕಡಿತಗೊಳಿಸದಂತೆ ಖಾಸಗಿ ಮತ್ತು ಸಾರ್ವಜನಿಕ ಉದ್ಯೋಗದಾತರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಮಾರ್ಚ್ 20 ರಂದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಲ್ಪನಾ ರಾಜ್ ಸಿಂಘೋಟ್ ಉದ್ಯೋಗದಾತರ ಸಂಘಕ್ಕೆ ಪತ್ರವೊಂದನ್ನು ಕಳುಹಿಸಿದ್ದರು.

 

'ಕೋರನ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಇಂದು ಭಾರತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಇಂತಹ ಸನ್ನಿವೇಶವನ್ನು ಎದುರಿಸಲು ಸಮಾಜದ ಎಲ್ಲ ವರ್ಗಗಳ ಸಂಘಟಿತ ಪ್ರಯತ್ನದ ಅಗತ್ಯವಿದೆ. ನೌಕರರ ಕೆಲಸ ಅಥವಾ ವೇತನವನ್ನು ಕಡಿತಗೊಳಿಸುವುದರಿಂದ ಈ ಬಿಕ್ಕಟ್ಟು ಇನ್ನಷ್ಟು ಹೆಚ್ಚುತ್ತದೆ.' 

'ನೌಕರರಿಗೆ ಸಂಬಳ ಕೊಡದೆ ಇರುವುದು, ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀಳುವುದಷ್ಟೇ ಅಲ್ಲದೆ, ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೌಕರರಿಗೆ ಇರಬೇಕಾದ ಮನೋಸ್ಥೈರ್ಯವನ್ನೂ ಸಹ ಕುಗ್ಗಿಸುತ್ತದೆ.'

'ಆದ್ದರಿಂದ, ಈ ಅವಧಿಯಲ್ಲಿ ಅನಾರೋಗ್ಯದಿಂದಾಗಿಯೋ, ಕೊರೋನಾ ತಡೆಗಟ್ಟಲು ಸರ್ಕಾರ ಹೇರಿದ ನಿರ್ಬಂಧಗಳಿಂದಗಿಯೋ, ನೌಕರರೇ ರಜೆ ಹಾಕಿದರೆ, ಅವರು ಕೆಲಸಕ್ಕೆ ಹಾಜರಿದ್ದರೆಂದು ಪರಿಗಣಿಸಿ ಅವರ ವೇತನವನ್ನು  ಕೊಡಬೇಕು ಹಾಗೂ ಅವರನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ   ಭರವಸೆಯನ್ನು ಕೊಡಬೇಕು.'

'ಇನ್ನು ಕರೋನಾ ನಿರ್ಬಂಧಗಳಿಂದ ಕಂಪನಿಗಳು ತಾವಾಗಿಯೇ ಲಾಕ್ ಡೌನ್  ಮಾಡಿದರೂ ಸಹ ನೌಕರರ ವೇತನವನ್ನು ಕಡಿತಗೊಳಿಸಬಾರದು' ಎಂದು ಉದ್ಯೋಗದಾತರಿಗೆ ಕೇಂದ್ರ ಸರ್ಕಾರ ನೀಡಿರುವ ಪತ್ರದಲ್ಲಿ ಬರೆದಿದೆ.