ತಮ್ಮ ಚಿತ್ರದ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದವರಿಗೆ ದೀಪಿಕಾ ಪಡುಕೋಣೆ ತರಾಟೆ
ಸದ್ಯ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಫೆಬ್ರವರಿ 11 ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ʼಗೆಹ್ರೇಯಾನ್ʼ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೆ ಚಿತ್ರದ ಟ್ರೈಲರ್ ಹಾಗು ಹಾಡುಗಳು ಬಿಡುಗಡೆಯಾಗಿದ್ದು, ವೀಕ್ಷಕರಿಂದ, ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಮದ್ಯೆ ಖ್ಯಾತ ಸೋಶಿಯಲ್ ಮಿಡಿಯಾ ಇನ್ಫುಯೆನ್ಸರ್ ಫ್ರೆಡ್ಡಿ ಬರ್ಡಿ ಎಂಬಾತ ತಮ್ಮ ಟ್ವಿಟ್ಟರ್ ಖಾತೆಯಲ್ಲಿ "ಬಾಲಿವುಡ್ ನ್ಯೂಟನ್ ನಿಯಮದ ಪ್ರಕಾರ, ಗೆಹ್ರೇಯಾನ್ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಬಟ್ಟೆಗಳು ಚಿಕ್ಕದಾಗುತ್ತವೆ." ಎಂದು ಟ್ವೀಟ್ ಮಾಡಿದ್ದರು
ಈ ಟ್ವೀಟ್ ನ್ನು ಗಮನಿಸಿದ ದೀಪಿಕಾ "ವಿಜ್ಞಾನಿಗಳು ಬ್ರಹ್ಮಾಂಡವು ಪ್ರೋಟಾನ್, ನ್ಯೂಟ್ರೋನ್ ಮತ್ತು ಎಲೆಕ್ಟ್ರಾನ್ಗಳಿಂದ ಮಾಡಲ್ಪಟ್ಟಿದೆ ಎಂದು ಹೇಳುತ್ತಾರೆ, ಆದರೆ ಅವರು ಮೂರ್ಖರನ್ನು ಉಲ್ಲೇಖಿಸಲು ಮರೆತಿದ್ದಾರೆ" ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ನಡುವೆ ಫ್ರೆಡಿಯ ಟ್ವೀಟ್ ಗೆ ಬಾಲಿವುಡ್ ನಟಿ ಮೃನಾಲ್ ಠಾಕೂರ್ ಪ್ರತಿಕ್ರಿಯಿಸಿದ್ದು,
Bhai you are so mentally sick I wish I could get you some flowers and Slam it on your face and thank you for spreading hate! Just to let you know I admire Deepika.Having said that I feel you must get yourself a life, rather than sitting at home and spreading hate, spread love!
— Mrunal Thakur (@mrunal0801) January 29, 2022
Had fun? MaAZA aaya? Now eat good food, go for a run and make friends who love you