
ಸಂಸದ ಬಚ್ಚೇಗೌಡ ಮಗ ಶರತ್ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷ ..!
ಒಂದೇ ವೇದಿಕೆಯಲ್ಲಿ ಸಂಸದ ಬಚ್ಚೇಗೌಡ ಮಗ ಶರತ್ ಪ್ರತ್ಯಕ್ಷ ..!
ಉಪಚುನಾವಣೆ ಬಳಿಕ ಅಪ್ಪ ಮಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ .
ಉಪಚುನಾವಣೆಯಲ್ಲಿ, ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ ಪರ ಕೆಲಸ ಮಾಡುವಂತೆ ಸಂಸದ ಬಚ್ಚೇಗೌಡಗೆ ಹಾಗೂ ಶರತ್ ಬಚ್ಚೇಗೌಡಗೆ ಸೂಚನೆ ನೀಡಲಾಗಿತ್ತು. ಆದರೆ ಶರತ್ ಬಚ್ಚೇಗೌಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಹೀಗಾಗಿ ಪಕ್ಷವಿರೋದಿ ಚಟುವಟಿಕೆ ಕಾರಣ ಶರತ್ ಅವರನ್ನ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಆನಂತರ ಖುದ್ದು ಸಿ.ಎಂ ಯಡಿಯೂರಪ್ಪ ಅವರು ಸಂಸದ ಬಚ್ಚೇಗೌಡರಿಗೆ ಎಂ.ಟಿ.ಬಿ ಪರವಾಗಿ ಚುನಾವಣಾ ಪ್ರಚಾರ ಮಾಡುವಂತೆ ಸೂಚಿಸಿದ್ದರು .
ಆದಾಗ್ಯೂ ಅನಾರೋಗ್ಯದ ಕಾರಣ ಹೇಳಿ ಚುನಾವಣಾ ಪ್ರಚಾರದಿಂದ ದೂರಉಳಿದಿದ್ದರು .
ನಂತರ ಉಪಚುನಾವಣೆಯಲ್ಲಿ ಶರತ್ ಗೆಲುವು ಸಾದಿಸಿದ್ದು ಈಗ ಇತಿಹಾಸ .
ಇದೀಗ ಅಪ್ಪ ಮಗ ಹೊಸಕೋಟೆಯ ಗುಟ್ಟಹಳ್ಳಿಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.