ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಿಂದ ದೀಪಕ್ ಚಹರ್ ಔಟ್
ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಬೆನ್ನುನೋವಿನ ಕಾರಣದಿಂದ ಭಾರತದ ವೇಗಿ ದೀಪಕ್ ಚಹಾರ್ ಪಂದ್ಯದಿಂದ ಹೊರಗುಳಿದಿದ್ದು,ಅವರ ಬದಲಿಯಾಗಿ ನವದೀಪ್ ಸೈನಿ ಅವರನ್ನು ಆಯ್ಕೆಮಾಡಲಾಗಿದೆ.
"ವೈಜಾಗ್ನಲ್ಲಿ ಬುಧವಾರಆಡಿದ ಎರಡನೇ ಏಕದಿನ ಪಂದ್ಯದ ನಂತರ ದೀಪಕ್ ಅವರ ಕೆಳ ಬೆನ್ನಿನ ನೋವು ಕಾಣಿಸಿತು, ಬಿಸಿಸಿಐ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿತು ಮತ್ತು ವೇಗದ ಬೌಲರ್ಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸ್ವಲ್ಪ ವಿಶ್ರಾಂತಿ ಬೇಕು ಎಂದು ಸೂಚಿಸಿದ್ದಾರೆ. ಹೀಗಾಗಿ ಅವರನ್ನು ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿಸಲಾಗಿದೆ."
ಮೊಹಮ್ಮದ್ ಶಮಿ ಮತ್ತು ಶಾರ್ದುಲ್ ಠಾಕೂರ್ ಅವರೊಂದಿಗೆ ಸೈನಿ ತಂಡದಲ್ಲಿ ಮೂರನೇ ಬೌಲರ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ವರ್ಷದ ಆಗಸ್ಟ್ನಲ್ಲಿ ಪಾದಾರ್ಪಣೆ ಮಾಡಿದ ಸೈನಿ ಇದುವರೆಗೆ ಐದು ಪಂದ್ಯಗಳನ್ನು ಆಡಿ ಆರು ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ಕೊನೆಯ ಬಾರಿಗೆ ಸೆಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಯಲ್ಲಿ ಆಡಿದ್ದರು.
ಈ ಸರಣಿ ಕೊನೆಯ ಪಂದ್ಯ ಡಿಸೆಂಬರ್ 22 ರ ಭಾನುವಾರ ಕಟಕ್ನಲ್ಲಿ ನಡೆಯಲಿದೆ