ಇರಲು ಸದಾ ಆರಾಮ, ಮಾಡಬೇಕು ಪ್ರತಿದಿನ ವ್ಯಾಯಾಮ....

ವ್ಯಾಯಾಮ ಎಂದರೆ ಶರೀರದ ಶಕ್ತಿ ಹಾಗೂ ಸ್ಥಿರತೆಯನ್ನು ಹೆಚ್ಚಿಸುವ ಒಂದು ವ್ಯವಸ್ಥಿತವಾದ ಕ್ರಿಯೆ. ವ್ಯಾಯಾಮದಿಂದ ಶರೀರ ಶಕ್ತಿಯುತವಾಗುತ್ತದೆ ಹಾಗೂ ಸದಾ ಚಟುವಟಿಕೆಯಿಂದ ಇರುತ್ತದೆ. 

ವ್ಯಾಯಾಮವನ್ನು ದಿನವೂ ಮುಂಜಾನೆ ಅಥವ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಂಗ ಮಾಡುವುದು ಸೂಕ್ತ. ಸೋಮಾರಿತನ ಹೆಚ್ಚಿರುವ ವ್ಯಕ್ತಿಗಳು  ಎರಡು ಹೊತ್ತೂ ವ್ಯಾಯಾಮ ಮಾಡಬಹುದು. ಚಳಿಗಾಲದಲ್ಲಿ ಮತ್ತು ವಸಂತ ಕಾಲದಲ್ಲಿ ವ್ಯಾಯಾಮ ಮಾಡಲು ನಮ್ಮ ದೇಹ ಹಿಂಜರಿಯುತ್ತದೆ; ಅದಕ್ಕಾಗಿ ಅಂತಹ ಕಾಲಗಳಲ್ಲಿ ಹೆಚ್ಚು ಶ್ರಮ ಹಾಕಿ ವ್ಯಾಯಾಮ ಮಾಡಬೇಕು. ವಯಸ್ಸಾದವರು, ಅಶಕ್ತರು ವಾಕಿಂಗ್ ಮಾಡಿದರೆ ಸಾಕು. 

ವ್ಯಾಯಾಮದಿಂದಾಗುವ ಅನುಕೂಲತೆಗಳು.....

1.ನಿಯಮಿತ ದೈಹಿಕ ಚಟುವಟಿಕೆಯು ನಿಮ್ಮ ಸ್ನಾಯುವಿನ ಶಕ್ತಿಯನ್ನು ಸುಧಾರಿಸುವುದು.

 2.ವ್ಯಾಯಾಮವು ನಿಮ್ಮ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸುವುದು.

3.ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವುದು. 

4.ನಿಮ್ಮ ಹೃದಯ ಮತ್ತು ಶ್ವಾಸಕೋಶದ ಆರೋಗ್ಯವು ಸುಧಾರಿಸಿದಾಗ, ದೈನಂದಿನ ಕೆಲಸಗಳನ್ನು ನಿಭಾಯಿಸಲು ನಿಮಗೆ ಹೆಚ್ಚಿನ ಶಕ್ತಿ ಇರುತ್ತದೆ.

5.ಶರೀರ ಚುರುಕುಗೊಳ್ಳುವುದು, ಸೋಮಾರಿತನ ಜಡತ್ವ ನೀಗುವುದು.

6.ಕೆಲಸ ಮಾಡುವ ಸಾಮರ್ಥ್ಯ ಹೆಚ್ಚುವುದು.

7.ಜೀರ್ಣ ಶಕ್ತಿ ಹೆಚ್ಚಾಗುವುದು ಆದ್ದರಿಂದ ಹಸಿವು ಹೆಚ್ಚಾಗುವುದು.

8.ಬೊಜ್ಜು ನಿವಾರಣೆಯಾಗಿ,  ಶರೀರ ಸೌಂದರ್ಯ ವರ್ಧನೆಯಾಗುವುದು.

9.ರೋಗ ನಿರೋಧಕ ಶಕ್ತಿ ಹೆಚ್ಚುವುದು.

10.ಶೌರ್ಯ ಧೈರ್ಯ ಹೆಚ್ಚುವುದು.