ಖಾಕಿಯಲ್ಲಿ ಮತ್ತೆ ಶಿವಣ್ಣ

ಖಾಕಿಯಲ್ಲಿ ಮತ್ತೆ  ಶಿವಣ್ಣ.

ರಸ್ತುಂ ಸಿನಿಮಾದ ನಂತರ ಮತ್ತೆ ಖಾಕಿ ತೊಡಲಿದ್ದಾರೆ ನಟ ಶಿವರಾಜ್ ಕುಮಾರ್. ಅನ್ಯಾಯದ ವಿರುದ್ಧ ಹೋರಾಡುವ ಪಾತ್ರ ಇದಾಗಿದ್ದು, ಖಡಕ್ ಪೊಲೀಸ್ ಆಫೀಸರ್ ಆಗಿ ಸೆಂಚುರಿಸ್ಟಾರ್ ನಟಿಸಲಿದ್ದಾರೆ. ಈ ಚಿತ್ರಕ್ಕೆ ಆರ್ ಡಿಎಕ್ಸ್ ಎಂದು ಹೆಸರಿಡಲಾಗಿದೆ.

ತಮಿಳಿನ ನಿರ್ದೇಶಕ ರವಿ ಅರಸು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿಲಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. ಪ್ರಿಯಾ ನಟನೆಯ ಮೂರನೇ ಸಿನಿಮಾ  ಇದಾಗಿದೆ. 'ಒಂದು ವಿಭಿನ್ನ ಕಥೆಯೊಂದಿಗೆ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದೇನೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಸದ್ಯದಲ್ಲಿ ಶೂಟಿಂಗ್ ಕೂಡ ಶುರುವಾಗಲಿದೆ ಎಂದು ನಿರ್ದೇಶಕರು ಹೇಳಿದರು.
ಈಗಾಗಲೇ ನಾನಾ ಸಿನಿಮಾಗಳಲ್ಲಿ ಶಿವರಾಜಕುಮಾರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.ಅವೆಲ್ಲಕ್ಕಿಂತ ಈ ಪಾತ್ರ ವಿಭಿನ್ನವಾಗಿರಾಲಿದೆ ಎಂದು ಹೇಳಿದರು.