ಏನಾಗಲಿದೆ ಜಾರ್ಖಂಡ್ ಚುನಾವಣಾ ಫಲಿತಾಂಶ.....?
ರಾಂಚಿ, ಡಿಸೆಂಬರ್ 23: ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆಯ ಐದು ಹಂತಗಳ ಮತದಾನ ಡಿಸೆಂಬರ್ 20 ರಂದು ಮುಕ್ತಾಯವಾಗಿದ್ದು, ಇಂದು ಸೋಮವಾರ ಫಲಿತಾಂಶ ಹೊರಬೀಳಲಿದೆ .
81 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರ್ಕಾರ ರಚಿಸಲು 41 ಕ್ಷೇತ್ರಗಳಲ್ಲಿ ಗೆಲುವು ಅವಶ್ಯಕವಾಗಿದೆ. ಆಡಿತಾರೂಢ ಬಿಜೆಪಿ ಗೆ ಇದು ಪ್ರತೀಷ್ಟೆಯ ಚುನಾವಣೆ ಆಗಿದ್ದರೆ, ಕಾಂಗ್ರೆಸ್ ಮತ್ತು ಜೆಎಂಎಂ ಪಕ್ಷಕ್ಕೆ ಅಸ್ಥಿತ್ವದ ಚುನಾವಣೆ ಆಗಿದೆ .
2014 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 37 ಸ್ಥಾನಗಳಲ್ಲಿ ಗೆದ್ದಿತ್ತು ನಂತರ ಜೆವಿಎಂಪಿ ಪಕ್ಷದ ಆರು ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಸಿ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಕಷ್ಟ ಕರ ಎನ್ನಲಾಗಿದೆ .
ರಾಮ ಮಂದಿರ, ಎನ್‌ಆರ್‌ಸಿ, ಸಿಎಎ ಇನ್ನೂ ಹಲವು ವಿಷಯಗಳನ್ನು ಬಿಜೆಪಿಯು ಜಾರ್ಖಂಡ್ ಚುನಾವಣೆಯಲ್ಲಿ ಮುನ್ನೆಲೆಗೆ ತಂದಿತ್ತು. ಕಾಂಗ್ರೆಸ್ ಸಹ ನಿರುದ್ಯೋಗ, ಬಿಜೆಪಿಯ ಕೋಮುವಾದ ಸೇರಿದಂತೆ ಇನ್ನೂ ಹಲವು ವಿಷಯಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿತ್ತು. ಮತದಾರ ಯಾರ ವಿಷಯಗಳ ಪರ ಒಲವು ಹೊಂದಿದ್ದಾನೆ ಎಂಬುದು ಎಂದು ತಿಳಿದು ಬಂದಿದೆ .
ಮಾವೋವಾದಿ, ನಕ್ಸಲ್‌ಗಳ ಹಾವಳಿ ಇರುವ ರಾಜ್ಯ ಜಾರ್ಖಂಡ್ ಆಗಿರುವ ಕಾರಣ ಐದು ಹಂತದಲ್ಲಿ ಮತದಾನ ನಡೆಸಲಾಗಿತ್ತು. ಈಗ ಮತ ಎಣಿಕೆಗೂ ಸಹ ಮಾವೋಗಳ ಬೆದರಿಕೆ ಇರುವ ಕಾರಣ ತೀವ್ರ ಭದ್ರತೆಯನ್ನು ಎಣಿಕೆ ಕೇಂದ್ರಗಳಿಗೆ ನೀಡಲಾಗಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿಯು ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಎಂಎಂ ಮೈತ್ರಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ ಇದೆ ಎಂದು ಕಂಡು ಬಂದಿದೆ .