ರಾಜ್ಯಕ್ಕೆ ಬರ್ತೀದ್ದಾರೆ ಮೋದಿ.....

ತುಮಕೂರು: ಪ್ರಧಾನಿ ಮೋದಿ 2 ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಮೋದಿ ಆಗಮನಕ್ಕೆ ಸರ್ಕಾರ ಎಲ್ಲಾ ಸಿದ್ಧತೆ ನಡೆಸಿದೆ.


ಬೆಂಗಳೂರಿನಲ್ಲಿ ಎರಡು ದಿನ!: 
ಗುರುವಾರ ಮಧ್ಯಾಹ್ನ 1:20ಕ್ಕೆ ಬೆಂಗಳೂರಿನ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‍ಗೆ ಆಗಮನ. ಬಳಿಕ ಮಧ್ಯಾಹ್ನ 1:25ಕ್ಕೆ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‍ನಿಂದ ಮಿಗ್-17 ಹೆಲಿಕ್ಯಾಪ್ಟರ್‌ನಲ್ಲಿ ತುಮಕೂರಿನತ್ತ ಪಯಣ. ಮಧ್ಯಾಹ್ನ 2 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್‍ನಲ್ಲಿ ಲ್ಯಾಂಡಿಂಗ್. ಮಧ್ಯಾಹ್ನ 2:15ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ (3:20ಕ್ಕೆ ಸಿದ್ದಗಂಗಾ ಮಠದಿಂದ ನಿರ್ಗಮನ). ಮಧ್ಯಾಹ್ನ 3:30ಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಿಸಾನ್ ಸಮ್ಮಾನ್‍ನ 4ನೇ ಕಂತಿನಲ್ಲಿ 6 ಕೋಟಿ ರೈತ ಕುಟುಂಬಗಳಿಗೆ 12 ಸಾವಿರ ಕೋಟಿ ನೇರ ಹಣ ವರ್ಗಾವಣೆ. ಇದೆ ವೇಳೆ ಆಯ್ದ 28 ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆ (ಮೀನು ಸಾಕಾಣಿದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.


ಸಂಜೆ 5:05 ನಿರ್ಗಮನ, 5:10ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‍ಗೆ ಆಗಮಿಸಿ ಬೆಂಗಳೂರಿನ ಹೆಚ್‍ಎಎಲ್‍ಗೆ ಪಯಣ. ಸಂಜೆ 5:50ಕ್ಕೆ ಎಚ್‍ಎಎಲ್‍ನ ಡಿಆರ್‍ಡಿಇ ಯುವ ವಿಜ್ಞಾನಿಗಳ ಕಾರ್ಯಕ್ರಮದಲ್ಲಿ ಭಾಗಿ. ರಾತ್ರಿ 7:05ಕ್ಕೆ ಡಿಆರ್‌ಡಿಓದಿಂದ ರಸ್ತೆ ಮೂಲಕ ನಿರ್ಗಮನ. ರಾತ್ರಿ 7:20ಕ್ಕೆ ರಾಜಭವನಕ್ಕೆ ಆಗಮನ ಹಾಗೂ ವಾಸ್ತವ್ಯ (ಡಿಆರ್‌ಡಿಓದ ಸುರಂಜನ ದಾಸ್ ರಸ್ತೆ, ಹೆಚ್ ಎಎಲ್ ರಸ್ತೆ,ಎಂ.ಜಿ ರಸ್ತೆ, ರಾಜಭವನ ರಸ್ತೆ, ಸಂಚಾರ ನಿಷೇಧ)
ಶುಕ್ರವಾರ ಬೆಳಗ್ಗೆ 9:40ಕ್ಕೆ ರಾಜಭವನದಿಂದ ರಸ್ತೆ ಮೂಲಕ ಹೆಬ್ಬಾಳದ ಜಿಕೆವಿಕೆಗೆ ಆಗಮನ (ಈ ವೇಳೆ ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿರ್ಬಂಧ)


ಜಿಕೆವಿಕೆಯಲ್ಲಿ ಬೆಳಗ್ಗೆ 10:00ರಿಂದ 11:05 ವರೆಗೆ 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ. ಬೆಳಗ್ಗೆ 11:10ಕ್ಕೆ ರಸ್ತೆ ಮೂಲಕ ಎಚ್‍ಎಎಲ್‍ಗೆ ವಾಪಸ್. ಬೆಳಗ್ಗೆ 11:30ಕ್ಕೆ ಹೆಚ್‍ಎಎಲ್‍ನಿಂದ ದೆಹಲಿಗೆ ಪ್ರಯಾಣ (ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್, ಎಚ್‍ಎಎಲ್ ರಸ್ತೆ, ದೊಮ್ಮಲೂರು, ಹೆಚ್‍ಎಎಲ್ ಮಾರ್ಗದಲ್ಲಿ ನಿರ್ಬಂಧ ಹೇರಲಾಗಿದೆ. ತುಮಕೂರು ಹಾಗೂ ಬೆಂಗಳೂರಲ್ಲಿ ಮೋದಿ ಆಗಮನ ಹಿನ್ನೆಲೆ ಭಾರಿ ಭದ್ರತೆ ಒದಗಿಸಲಾಗಿದೆ.