ವಿರಾಟ್ ಪಡೆಗೆ ಸರಣಿ.....
ವಿರಾಟ್ ಪಡೆಗೆ ಸರಣಿ....!
ಭಾನುವಾರ ನಡೆದ ಭಾರತ - ವೆಸ್ಟ್ ಇಂಡೀಸ್ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಪಡೆ ಸರಣಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ವೆಸ್ಟ್ಇಂಡೀಸ್ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನ ನೀಡಿದರು. ಇದರಿಂದಾಗಿ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ ಆದರೆ ಮಧ್ಯಮ ಕ್ರಮಾಂಕದಲ್ಲಿ ಪುರನ್(89) ನಾಯಕ ಪೊಲಾರ್ಡ್ (ಔಟಾಗದೆ 74 ) ಅಬ್ಬರದ ಫಲವಾಗಿ ತಂಡವು 50 ಓವರುಗಳಲ್ಲಿ 5 ವಿಕೆಟ್ ಗಳಿಗೆ 315 ರನ್ ಗಳಿಸಿತು.
ಪ್ರವಾಸಿ ವೆಸ್ಟ್ ಇಂಡೀಸ್ ತಂಡ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ರೋಹಿತ್ ಶರ್ಮ(63) ಕೆ ಎಲ್ ರಾಹುಲ್ (77) ಉತ್ತಮ ಜೊತೆಯಾಟ ತಂದುಕೊಟ್ಟರು. ಬಾರಾಬಾತಿ ಕ್ರೀಡಾಂಗಣವು ಕೊಹ್ಲಿ ಪಾಲಿಗೆ ಅದೃಷ್ಟದ ತಾಣವಾಗಿ ಪರಿಣಮಿಸಿತು. ಈ ಮೈದಾನದಲ್ಲಿ ಮೊದಲ ಬಾರಿಗೆ ವಿರಾಟ್ ಅರ್ಧ ಶತಕ ಗಳಿಸಿದರು (85).
ನಂತರ ರವೀಂದ್ರ ಜಡೇಜ ಜೊತೆ ತಕ್ಕ ಜೊತೆಯಾಟ ನೀಡಿದ ಶಾರ್ದೂಲ್ ಏಳನೇ ವಿಕೆಟ್ ಜೊತೆಯಾಟದಲ್ಲಿ 30ರನ್ ಸೇರಿಸಿ ಇಬ್ಬರೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.
ಸ್ಕೋರ್ ವಿವರ....
ವೆಸ್ಟ್ ಇಂಡೀಸ್ 5ಕ್ಕೆ 315 (50 ಓವರ್ ಗಳಲ್ಲಿ)
ಭಾರತ 6ಕ್ಕೆ 316(48.4 ಓವರ್ ಗಳಲ್ಲಿ)
.... ಫಲಿತಾಂಶ....
ಭಾರತಕ್ಕೆ ನಾಲ್ಕು ವಿಕೆಟ್ ಗೆಲುವು 2-1 ರಿಂದ ಸರಣಿ ಜಯ.
ಪಂದ್ಯಶ್ರೇಷ್ಠ :ವಿರಾಟ್ ಕೊಹ್ಲಿ
ಸರಣಿಶ್ರೇಷ್ಠ :ರೋಹಿತ್ ಶರ್ಮಾ