4 ದಿನಗಳ ಟೆಸ್ಟ್ ಗೆ ಸೆಹ್ವಾಗ್ ವಿರೋಧ..!
ಟೆಸ್ಟ್ ಕ್ರಿಕೆಟ್ ಅನ್ನು ಈಗ 5 ದಿನಗಳದಿಂದ ಅದನ್ನು 4 ದಿನಕ್ಕೆ ಇಳಿಸುವ ಐಸಿಸಿ ಪ್ರಸ್ತಾಪ ವ್ಯಕ್ತಪಡಿಸಿದೆ. ಅದಕ್ಕೆ ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ವಿರೋಧಿಸಿದರು.
ಟೆಸ್ಟ್ ಕ್ರಿಕೆಟನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸಿದರೆ ಮೀನನ್ನು ನೀರಿನಿಂದ ಹೊರ ತೆಗೆದಂತೆ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟನ್ನು ನಾಲ್ಕು ದಿನಗಳಿಗೆ ಇಳಿಸುವ ಐಸಿಸಿ ಪ್ರಸ್ತಾಪವನ್ನು ಸೆಹ್ವಾಗ್ ವಿರೋದಿಸಿದರು. "ಡೈಪರ್ ಹಾಗೂ ಟೆಸ್ಟ್ ಕ್ರಿಕೆಟ್ ಎರಡೂ ಮಣ್ಣಾದ ಮೇಲೆ ಬದಲಿಸಬೇಕು" ಎನ್ನುವ ಮೂಲಕ ನೆರೆದಿದ್ದ ಆಲಿ ಮಾಜಿ ಕ್ರಿಕೆಟಿಗರನ್ನು ನಗಿಸಿದರು. ಚಂದ್ರ ನಾಲ್ಕು ದಿನ ಇರುತ್ತಾನೆ ,ಆದರೆ ಟೆಸ್ಟ್ ಕ್ರಿಕೆಟ್ ಅಲ್ಲ.ಮೀನು ನೀರಿನಲ್ಲಿ ಇದ್ದರೆ ಚೆನ್ನಾಗಿರುತ್ತದೆ .ಆಚೆ ತೆಗೆದರೆ ಅದು ಸತ್ತು ಹೋಗುತ್ತದೆ ಎಂದು ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಹೇಳಿದರು.