ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಮಾಡುತ್ತಾರಂತೆ......!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ಹಿಂಪಡೆದು ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತೆ ಎಂದು ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ತಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿರುವ ರೈತರ ಸಮಸ್ಯೆಯನ್ನು ಪರಿಹಾರ ಮಾಡಬೇಕು ಅದನ್ನು ಬಿಟ್ಟು ಮೊಂಡತನ ಪ್ರದರ್ಶನ ತೋರಿದರೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ ಅವರಿಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜ್ಜಾರೆ ಎಚ್ಚರಿಕೆಯ ಪತ್ರ ಬರೆದಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಿರತ ರೈತರು ಸಾಂಕೇತಿಕವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೂಡಾ ಮಾಡಿದ್ದರು ಅದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಕೂಡಾ ಭಾಗಿಯಾಗಿದ್ದರು. ರೈತರ ಚಿಂತನೆ ಕಾರಣವೇನು? ಎಂಎಸ್ಪಿ ಪರಿಹಾರ ನಿದಿಯ ಸೂತ್ರವೇನು? ರೈತರ ಸಮಸ್ಯೆ ಬಗೆಹರಿಸುವ ತನಕ ಆಮ್ ಆದ್ ಮಿ ಪಕ್ಷ ರೈತರ ಜೊತೆಗೆ ಗಟ್ಟಿಯಾಗಿ ನಿಲುತ್ತೆ ಎಂದು ಹೇಳಿದ್ದಾರೆ. ಇದೀಗ ಅವರ ಜೊತೆಗೆ ಅಣ್ಣಾ ಹಜಾರೆ ಕೂಡಾ ಕೇಂದ್ರ ಸರ್ಕಾರಕ್ಕೆ ಉಪವಾಸ ಸತ್ಯಾಗ್ರಹದ ಕುರಿತು ಪತ್ರ ಬರೆಯುವದರಿಂದ ರೈತರಿಗೆ ಇನ್ನಷ್ಟು ಬಲ ಬಂದಂತಾಗಿದೆ.
ವರದಿ: ಬಸವರಾಜ ಕುಂಬಾರ