ರಾಜ್ಯಕ್ಕೆ ಬಲ ತಂದ ಕೆಎಲ್ ರಾಹುಲ್ ಆಗಮನ....

ಜಮ್ಮು ಮತ್ತು ಕಾಶ್ಮೀರ ವಿರುದ್ಧ ನಡೆದ ಕ್ವಾಟರ್ ಫೈನಲ್ ನಲ್ಲಿ ಕರ್ನಾಟಕ ತಂಡ ಗೆಲ್ಲುವ ಮೂಲಕ ಸಮೀಸ್ ಗೆ ಎಂಟ್ರಿ ಕೊಟ್ಟಿದೆ.  ಫೆ.29ರಂದು ಕಲ್ಕತ್ತಾದಲ್ಲಿ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯಕ್ಕೆ ಕೆ ಲ್ ರಾಹುಲ್ ತಂಡಕ್ಕೆ ಮರಳಿದ್ದಾರೆ.

ಪವನ್ ದೇಶಪಾಂಡೆ ಬದಲು ಕೆ‌.ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ.

 

ಅದ್ಭುತ ಲಯದಲ್ಲಿರುವ ಕೆ.ಎಲ್ ರಾಹುಲ್  ಆಗಮನದಿಂದ ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಇನ್ನು  ನಾಯಕ ಕರಣ್ ನಾಯರ್ ಹಾಗೂ ದೇವದತ್ತ್ ಪಡಿಕಲ್ ಮತ್ತು ಆರ್ ಸಮರ್ಥ ಅಗ್ರಕ್ರಮಾಂಕ ಜವಾಬ್ದಾರಿ ವಹಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ, ಕೆ ವಿ ಸಿದ್ಧಾರ್ಥ್ ಹಾಗೂ ಶರತ್ ಶ್ರೀನಿವಾಸ ಆಲ್ರೌಂಡರ್ ಕೆ ಗೌತಮ್ ವಹಿಸಲಿದ್ದಾರೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ ,ರೋನಿತ್ ಮೊರೆ, ಮಿಥುನ್, ಜೆ ಸೂಚಿತ್ ಅವರ ಸೇರಿ ನಿರ್ವಹಿಸಲಿದ್ದಾರೆ

 

ಮೊದಲ ಇನ್ನಿಂಗ್ಸ್‌ನಲ್ಲಿ 206 ರನ್‌ಗಳ ಗಳಿಸಿದ್ದು ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 316 ರನ್ ಗಳಿಸಿ ಜಮ್ಮು ಕಾಶ್ಮೀರ ಗೆಲುವಿಗೆ 331 ರನ್ ಗುರಿ ನೀಡಿದ್ದ ಕರ್ನಾಟಕ. ಕೆ.ಗೌತಮ್ ಮೊನಚಿನ ದಾಳಿ ಮುಂದೆ ಮಂಕಾದ ಪರ್ವೇಜ್ ರಸೂಲ್ ಪಡೆ.ದ್ವಿತೀಯ ಇನ್ನಿಂಗ್ಸ್‌ನಲ್ಲಿ 163 ರನ್‌ಗೆ ಜಮ್ಮು ಕಾಶ್ಮೀರ ಆಲೌಟ್ . ಗೆಲುವಿನೊಂದಿಗೆ  ಸೆಮಿಫೈನಲ್ಸ್ ತಲುಪಿದ ಕರ್ನಾಟಕ.