ನಿರ್ಭಯಾ ಅತ್ಯಾಚಾರಿ ಆರೋಪಿಗಳ ಮೇಲ್ಮನವಿ ತಿರಸ್ಕರ; ಫೆ.1 ಕ್ಕೆ ಗಲ್ಲು ಶಿಕ್ಷೆ ಫಿಕ್ಸ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿ ಪವನ್ ಕುಮಾರ್​ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಆತನ ಅರ್ಜಿಯನ್ನು ತಿರಸ್ಕರಿಸಿದೆ. ಈ ಮೂಲಕ ನಾಲ್ಕೂ ಜನ ಅತ್ಯಾಚಾರಿಗಳು ದೆಹಲಿ ಹೈಕೋರ್ಟ್​ ಜಾರಿ ಮಾಡಿರುವ ಡೆತ್​ ವಾರಂಟ್​ ನಂತೆ ಫೆಬ್ರವರಿ 1 ರಂದು ಗಲ್ಲಿಗೇರುವುದು ಖಚಿತವಾಗಿದೆ.​


ಈ ಹಿಂದೆಯೇ ಸುಪ್ರೀಂ ಕೋರ್ಟ್​ ಈ ನಾಲ್ವರ ಗಲ್ಲು ಶಿಕ್ಷೆಯನ್ನು ಖಚಿತಪಡಿಸಿತ್ತು. ಹೀಗಾಗಿ ದೆಹಲಿ ಹೈಕೋರ್ಟ್​ ಜನವರಿ 22 ರಂದು ನಾಲ್ಕೂ ಜನ ನಿರ್ಭಯಾ ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಡೆತ್​ ವಾರಂಟ್ ನೀಡಿತ್ತು. ಎರಡನೇ ಬಾರಿ ಫೆಬ್ರವರಿ.1ಕ್ಕೆ ಡೆತ್ ವಾರಂಟ್​ ಹೊರಡಿಸಲಾಗಿತ್ತು. ಹೀಗಾಗಿ ನಾಲ್ವರನ್ನೂ ಗಲ್ಲಿಗೇರಿಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು.