ಭಾರತದಲ್ಲಿ ನೂರರ ಗಡಿ ದಾಟಿದ ಕೊವಿಡ್ - 19 ಸಾವಿನ ಸಂಖ್ಯೆ....ಲಾಕ್ ಡೌನ್ ನಡುವೆಯೂ ನಿಯಂತ್ರಣಕ್ಕೆ ಬಾರದ ಕೊರೊನಾ ಆರ್ಭಟ...

ದಿನೇ ದಿನೇ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವ ಕೊರೊನಾ ಸದ್ಯಕ್ಕೆ ತನ್ನ ಆರ್ಭಟವನ್ನು ನಿಲ್ಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ನೋಡ ನೋಡುತ್ತಿದ್ಡಂತೆ ಕೊರೊನಾ ಗೆ ಬಲಿಯಾದವರ ಸಂಖ್ಯೆ ನೂರರ ಗಡಿ ದಾಟಿದೆ. ಇವತ್ತಿನ ಅಪ್ ಡೇಟ್ ಪ್ರಕಾರ ಭಾರತದಲ್ಲಿ ಕಿಲ್ಲರ್ ಕೊರೊನಾದಿಂದಾಗಿ 134 ಜನ ಮೃತ ಪಟ್ಟಿದ್ದಾರೆ. 4000 ಕ್ಕೂ ಹೆಚ್ಚಿನ ಜನ ಸೋಂಕಿತರಾಗಿದ್ದಾರೆ. ಹಾಗಾದ್ರೇ ಯಾವ ರಾಜ್ಯದಲ್ಲಿ ಎಷ್ಟು ಜನಕ್ಕೆ ಸೋಂಕು ತಗುಲಿದೆ, ಯಾವ ರಾಜ್ಯದಲ್ಲಿ  ಎಷ್ಟು ಜನ ಕೊರೊನಾಗೆ ಬಲಿಯಾಗಿದ್ದಾರೆ ನೋಡೋಣ ಬನ್ನಿ....

ಮಹಾರಷ್ಟ ದಲ್ಲಿ ಅತಿ ಹೆಚ್ಚಿನ ಸೋಂಕಿತರು.... 

ಕೊರೊನಾ ಸೊಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಸೊಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇದುವರೆಗೂ ಮಹಾರಾಷ್ಟ್ರದಲ್ಲಿ 690 ಜನರಿಗೆ ಸೋಂಕು ತಗುಲಿದ್ದು 45 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಮುಂಬೈನ ಧಾರಾವಿಗೂ ಸೊಂಕು ತಗಲಿರುವುದು ಮಹಾರಾಷ್ಟ್ರ ಸರ್ಕಾರದ ಚಿಂತೆ ಹೆಚ್ಚಿಸಿದೆ. ಕೇರಳದಲ್ಲಿ ಇದುವರೆಗೂ 314 ಜನರಿಗೆ ಸೋಂಕು ತಗುಲಿದ್ದು, 3 ಜನ ಸಾವಿಗಿಡಾಗಿದ್ದಾರೆ. ಇನ್ನುಳಿದಂತೆ ದೆಹಲಿಯಲ್ಲಿ 503 ಜನ ತಮಿಳುನಾಡಿನಲ್ಲಿ 571 ಜನ, ತೆಲಂಗಾಣದಲ್ಲಿ  378 ಜನ ಹಾಗೂ ಆಂಧ್ರ ಪ್ರದೇಶದಲ್ಲಿ 226 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದುವರೆಗೂ ದೇಶದಲ್ಲಿ ಒಟ್ಟು 267 ಜನ ಕೊರೊನಾ ರೋಗದಿಂದ ಗುಣಮುಖರಾಗಿ ಡಿಸ್ಚಾರ್ಜ ಆಗಿದ್ದಾರೆ.

ಕರ್ನಾಟಕದಲ್ಲೂ ಕಡಿಮೆಯಾಗುತ್ತಿಲ್ಲ ಆತಂಕದ ಕಾರ್ಮೋಡ.....

ಇನ್ನು ಕಿಲ್ಲರ್ ಕೊರೊನಾ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಸಮರೊಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಆದರೂ ಮಹಾಮಾರಿಯ ಹರಡುವಿಕೆ ಮಾತ್ರ ಹೆಚ್ಚುತ್ತಲೇ ಇದೆ. ಇಲ್ಲಿಯವರೆಗೂ ರಾಜ್ಯದಲ್ಲಿ 163 ಜನರಿಗೆ ಸೋಂಕು ತಗುಲಿದೆ. 4 ಜನರನ್ನ ಕ್ರೂರಿ ಕೊರೊನಾ ಬಲಿಪಡೆದಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚು ಜನ ಸೋಂಕಿಗೆ ಒಳಗಾಗಿದ್ದಾರೆ. 

ಲಾಕ್ ಡೌನ್ ಹೇರಿ ಇಂದಿಗೆ 12 ದಿನ ಕಳೆದರೂ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದಿರುವುದು ಸರ್ಕಾರ ಹಾಗೂ ಜನರ ಆತಂಕ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಆಗುವ  ಸಾಧ್ಯತೆ ಇದೆ.