ಧೋನಿ ಹೇಳಿದ ಮಾತು ನೆನೆಪಿಸಿಕೊಂಡ ಬೂಮ್ರಾ...

"ನೀನು ನೀನಾಗಿರು" ಧೋನಿಯ ಮಾತನ್ನ ನೆನೆದ ಬೂಮ್ರಾ.....!

ಟೆಸ್ಟ್ ಪಂದ್ಯದಲ್ಲಿ ವೇಗಿ ಬೂಮ್ರಾ ಬೌಲಿಂಗ್ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿರುವ ಬೆನ್ನಲ್ಲೇ ಧೋನಿ ಆಡಿರುವ ಮಾತುಗಳನ್ನು ನೆನೆದರು.ನೀನು ನೀನಾಗಿರು..ಗೇಮ್ ಎಂಜಾಯ್ ಮಾಡು' ಅಂತ ಹೇಳಿದ್ರು. ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಅಂತ ಬೂಮ್ರಾ ಹೇಳಿದ್ದಾರೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಜಸ್ಪ್ರೀತ್ ಬೂಮ್ರಾ, ಕೆಲವು ದಿನಗಳ ರೆಸ್ಟ್​ ನಂತರ ನ್ಯೂಜಿಲೆಂಡ್ ಟೂರ್​​ಗೆ ವಾಪಸ್ಸಾಗಿದ್ದರು.ಮೊದಲ ಟೆಸ್ಟ್ ನಲ್ಲಿ 26 ಓವರ್ ಎಸೆದ ಬೂಮ್ರಾ 88 ರನ್​ಗಳನ್ನು ನೀಡಿ ಕೇವಲ ಒಂದು ವಿಕೆಟ್​ ಕಿತ್ತಿದ್ದರು.

ಬ್ಯಾಟ್ಸ್​​ಮನ್​ಗಳ ಎದೆ ನಡುಗಿಸುತ್ತಿದ್ದ ವೇಗಿ, ನ್ಯೂಜಿಲೆಂಡ್ ಪ್ರವಾಸದಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅಭಿಮಾನಿಗಳು ಕೊಂಚ ನಿರಾಸೆಯಾಗಿದ್ದಾರೆ.ಈ ಬಗ್ಗೆ ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆ ಭಾರತದ ವೇಗದ ಬೌಲರ್ ತಮ್ಮ ಮೊದಲ ಪಂದ್ಯದ ದಿನ ಧೋನಿ ತಮಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ಕಂಡ ಶ್ರೇಷ್ಠ ಡೆತ್ ಓವರ್ ಬೌಲರ್​ಗಳಲ್ಲಿ ಬೂಮ್ರಾ ಕೂಡ ಒಬ್ಬರು ಅನ್ನುವ ಹೆಗ್ಗಳಿಕೆಯನ್ನು ಕಡೆಗಣಿಸುವಂತಿಲ್ಲ.