ಕೊವಿಡ್ ಲಸಿಕೆ ಉತ್ಪಾದನೆಯಲ್ಲು ಮೇಕ್ ಇನ್ ಇಂಡಿಯಾಗೆ ಪ್ರಾಮುಖ್ಯತೆ
ಕರೋನದ ವಿರುದ್ಧದ ಭಾರತದ ಹೋರಾಟ ನಿರ್ಣಾಯಕ ಹಂತ ತಲುಪಿದೆ. ಭಾರತ ಈಗಾಗಲೇ ಎರಡು ಲಸಿಕೆಗಳನ್ನ ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದೆ , ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಗಳನ್ನ ಪರಿಚಯಿಸಲಿದೆ ಎಂದು ಪ್ರಧಾನಿ ಮೊದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಆನ್ ಲೈನ್ ಮೂಲಕ ನಡೆದ ವಿಶ್ವ ಆರ್ಥಿಕ ವೇದಿಕೆ(WEF)ಯ ದಾವೋಸ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕತೆಗೆ ಬಲ ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಜಾಗತಿಕ ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳಿಗೆ ಕರೆ ನೀಡಿದರು. ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಈಗಾಗಲೇ ಚಾಲನೆ ದೊರಕಿದ್ದು ಕೇವಲ 12 ದಿನಗಳಲ್ಲಿ 24 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕಿದೆ . ಭಾರತ ಕರೋನವನ್ನ ಎದುರಿಸಲು ಸಮರ್ಥವಾಗಿದೆ. ಭಾರತದಲ್ಲಿ 70ರಿಂದ 80 ಕೋಟಿ ಜನರಿಗೆ ಸೋಂಕು ತಗುಲಲಿದೆ. ೨ ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಲಿದ್ದಾರೆ ಎಂದು ಊಹಿಸಿದ್ದರು. ಆದರೆ ಆ ಊಹೆ ಸುಳ್ಳಾಗಿದೆ, ಭಾರತ ಈ ಸಾಂಕ್ರಾಮಿಕ ರೋಗವನ್ನ ಸಮರ್ಥವಾಗಿ ಎದುರಿಸಿದೆ.
ಭಾರತ ಕರೋನ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಮತ್ತು ದೇಶೀಯವಾಗಿ ಲಸಿಕೆಗಳನ್ನ ತಯಾರಿಸಿ ಈಗ ವಿದೇಶಗಳಿಗೂ ರಫ್ತು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದೇಶಿಯ ಲಸಿಕೆಗಳು ಬರಲಿವೆ ಎಂದು ಮೋದಿ ತಿಳಿಸಿದರು. ಇನ್ನು ಭಾರತ ಆರ್ಥಿಕ ಅಭಿವೃದ್ಧಿ ಕಡೆಗೆ ಗಮನ ಹರಿಸಲಿದ್ದು, ವ್ಯಾಪಾರೋದ್ಯಮಕ್ಕೆ ಇನ್ನಷ್ಟು ಪ್ರಾಶಸ್ತ್ಯ ಕೊಡಲಿದೆ. ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬರಹ: ಪ್ರೀತಿಕಾ