ಮತ್ತೇ ಖಾಕಿ ತೊಡಲಿದ್ದಾರೆ ಚಿರಂಜೀವಿ ಸರ್ಜಾ...ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದ ಹೊಸ ಚಿತ್ರ ಏಪ್ರಿಲ್..ಚಿರುಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್.
ಬೆಂಗಳೂರು : ಇಂದು ನಗರದ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಹೊಸ ಸಿನಿಮಾ ಏಪ್ರಿಲ್ ನ ಮೂಹುರ್ತ ನೆರವೇರಿತು.ನಂತರ ಚಿತ್ರ ತಂಡ ಪತ್ರಿಕಾ ಗೋಷ್ಠಿಯನ್ನು ನಡೆಸಿತು. ಮಹೂರ್ತಕ್ಕೆ ರಾಜಾಹುಲಿ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ಆಗಮಿಸಿ ಶುಭ ಹಾರೈಸಿದರು.
ಇನ್ನು ಈ ಚಿತ್ರವನ್ನು ಸತ್ಯ ರಾಯೆಲ್ಲ ನಿರ್ದೇಶನ ಮಾಡುತಿದ್ದು,ಇದು ಅವರ ಮೊದಲ ಸಿನಿಮಾ. ಚಿತ್ರದಲ್ಲಿ ನಾಯಕ ನಟನಾಗಿ ಚಿರಂಜೀವಿ ಸರ್ಜಾ ಕಾನಿಸಿಕೊಳ್ಳುತಿದ್ದು , ಡಿಂಪಲ್ ಕ್ವೀನ್ ರಚಿತಾ ರಾಮ್ ಚಿರುಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದೊಂದು ಆಕ್ಷನ್ ಥ್ರಿಲ್ಲರ್ ಮೂವಿಯಾಗಿರಲಿದ್ದು, ಇದರಲ್ಲಿ ಚಿರಂಜೀವಿ ಸರ್ಜಾ ಪೋಲೀಸ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರಕ್ಕೆ ಏಪ್ರಿಲ್ ಎಂಬ ಶಿರ್ಷಿಕೆ ಯಾಕೆ ಅಂತ ನಿರ್ದೇಶಕರನ್ನು ಪ್ರಶ್ನಿಸಿದಾಗ,
ಏಪ್ರಿಲ್ ಎನ್ನುವುದು ಚಿತ್ರದಲ್ಲಿನ ಪಾತ್ರವೊಂದರ ಹೆಸರಾಗಿದ್ದು ಸಿನಿಮಾ ನೋಡಿದಾಗ ಆ ಪಾತ್ರದ ಮಹತ್ವ ಗೊತ್ತಾಗಲಿದೆ ಎಂದರು.
ಇನ್ನು ರವಿ ಬಸ್ರುರೂ ಸಹೋದರ ಸಚಿನ್ ಬಸ್ರುರೂ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಗಿರೀಶ್ ಗೌಡ ಛಾಯಾ ಗ್ರಹಣ ಮಾಡುತ್ತಿದ್ದು,ನಾರಾಯಣ ಬಾಬು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.