ದೆಹಲಿ ಗದ್ದುಗೆ ಮತ್ತೆ ಕೇಜ್ರಿವಾಲ್ ಪಾಲು : ಮತಗಟ್ಟೆ ಸಮೀಕ್ಷೇಗಳ ಭವಿಷ್ಯ.....

ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದು, ಮತದಾರನ ತೀರ್ಪು ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ. 

ಇನ್ನು ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಹುತೇಕ ಸಮೀಕ್ಷೇಗಳು ಮೂರನೇ ಬಾರಿಗೆ ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಅಗಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಕಳೆದ ಬಾರಿಯಂತೆ ಆಪ್ ಕ್ಲೀನ್ ಸ್ವೀಪ್ ಮಾಡದೇ ಇದ್ದರು ಸರಳ ಬಹುಮತವನ್ನು ನಿರಾಯಾಸವಾಗಿ ತಲುಪಲಿದೆ.2015 ಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಆದರೆ ಅಧಿಕಾರದ ಗದ್ದುಗೆ ಏರಲು ಬಿಜೆಪಿಗೆ ಸಾಧ್ಯವಿಲ್ಲ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ಕೂಡ ಶೂನ್ಯ ಸಾಧನೆ ಮಾಡಲಿದೆ.ಹೆಚ್ಚೆಂದರೆ ಒಂದು ಸ್ಥಾನದಲ್ಲಿ ಗೆಲ್ಲಬಹುದಷ್ಟೇ ಎಂಬುದು ಸಮೀಕ್ಷೇಗಳ ಸಾರ.

70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 36 ಸ್ಥಾನ. ಕಳೆದ ವಿಧಾನಸಭಾ ಚುನವಣೆಯಲ್ಲಿ ಆಪ್ ಪಕ್ಷ 67 ಸ್ಥಾನಗಳನ್ನು ಗೆದ್ದುಕೊಂಡಿತ್ತು.