ತಂಡಕ್ಕೆ ಆಲ್ ರೌಂಡರ್ ಗಳಿಗಿಂತ ವಿಕೆಟ್ ಪಡೆಯೋ ಬೌಲರ್ ಗಳೇ ಬೆಸ್ಟ್ ಎಂದ ಕುಂಬ್ಳೆ

ತಂಡಕ್ಕೆ ಆಲ್ ರೌಂಡರ್ ಗಳಿಗಿಂತ ವಿಕೆಟ್ ಪಡೆಯೋ ಬೌಲರ್ ಗಳೇ ಬೆಸ್ಟ್ ಎಂದ ಕುಂಬ್ಳೆ....!

ಒಂದು ಕ್ರಿಕೆಟ್ ಟೀಮ್ ಅಂದ್ರೇ ಅಲ್ಲಿ ಬ್ಯಾಟ್ಸ್ ಮನ್, ಬೌಲರ್ ಗಳಿಗಿಂತ ಆಲ್ ರೌಂಡರ್ ಗೆ ಕೊಂಚ ಮಹತ್ವ ಹೆಚ್ಚೇ ಇರುತ್ತೆ ಅಂದರೆ ತಪ್ಪಾಗಲ್ಲ. ಆದರೆ ಭಾರತದ ಕ್ರಿಕೆಟ್ ದಂತಕತೆ ಕನ್ನಡಿಗ ಅನಿಲ್ ಕುಂಬ್ಳೆ ಪ್ರಕಾರ ಆಲ್ ರೌಂಡರ್ ಗಳಿಗಿಂತ ವಿಕೆಟ್ ಪಡೆಯುವ ಬೌಲರ್ ಗಳು ತಂಡದಲ್ಲಿದ್ದರೆ ಮ್ಯಾಚ್ ಗೆದ್ದ ಹಾಗೇ ಅಂತಾನೇ ಅರ್ಥ ಎಂದು ಅನಿಲ್ ಕುಂಬ್ಳೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ಗೆ ಕೊಯ್ಲಿಗೆ ಸಲಹೆ ನೀಡಿರುವ ಕುಂಬ್ಳೆ ತಂಡದಲ್ಲಿ ಉತ್ತಮ ಬೌಲರ್ ಗಳಿದ್ರೆ ಬೆಟರ್ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಟಿ20 ಟೂರ್ನಿಯಲ್ಲಿ ಆಲ್ ರೌಂಡರ್ ಗಳಿಗಿಂತ ಹೆಚ್ಚಾಗಿ ವಿಕೆಟ್ ಪಡೆಯೋ ಬೌಲರ್ ಗಳನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಳ್ಳಬೇಕು. ಅವರ ಜೊತೆಗೆ ಕುಲದೀಪ್, ಚಾಹಲ್ ರಂತಹ ಸ್ಪಿನ್ನರ್ ಗಳಿದ್ದರೂ ತುಂಬಾನೇ ಸಹಕಾರಿಯಾಗುತ್ತದೆ  ಎಂದು ಹೇಳಿದ್ದಾರೆ.

ಐಪಿಎಲ್ ನಲ್ಲಿ ಧೋನಿ....!
ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಟಿ20 ವಿಶ್ವಕಪ್ ಗೆ ವಾಪಸ್ಸಾಗಬೇಕಾದರೆ ಐಪಿಎಲ್ ತುಂಬಾನೇ ಮುಖ್ಯ ಎಂದಿದ್ದಾರೆ. ಐಪಿಎಲ್ ನಲ್ಲಿ ಅವರ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಅನ್ನೋದು ಮುಖ್ಯ ಆಗುತ್ತೆ ಹಾಗಾಗಿ ಕಾದು ನೋಡೋಣ ಎಂದಿದ್ದಾರೆ.