ಚೀನಿ ಸೈನಿಕರು ಭಾರತದ ಯೋಧರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದೇಕೆ...?

ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ..ಅದಕ್ಕೆ ಕಾರಣ ಇಂದಿಗೂ ಭಾರತ ಹಾಗೂ ಚೀನಾ ನಡುವೆ ಅಂತರಾಷ್ಟ್ರೀಯ ಗಡಿರೇಖೆಯನ್ನು ಸ್ಪಷ್ಟವಾಗಿ ಗುರುತಿಸದೇ ಇರುವುದು...ಎರಡು ದೇಶಗಳು ಅಂತರಾಷ್ಟ್ರೀಯ ಗಡಿರೇಖೆ ಗುರುತಿಸೊವರೆಗೂ ತಮ್ಮದೇ ಆದ ಗಡಿಯನ್ನು ಹಾಕಿಕೊಂಡಿವೆ. ಆದ್ದರಿಂದಲೇ ಭಾರತ ಹಾಗೂ ಚೀನಾ ನಡುವಿನ ಗಡಿರೇಖೆಯನ್ನು ವಾಸ್ತವ ಗಡಿ ನಿಯಂತ್ರಣ ಎಂದು ಕರೆಯಲಾಗುತ್ತದೆ.

ಭಾರತ ಹಾಗೂ ಚೀನಾ  3488 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಜಮ್ಮು ಕಾಶ್ಮೀರ , ಅರುಣಾಚಲ ಪ್ರದೇಶ ರಾಜ್ಯದ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುವ ಚೀನಾ ಆಗಾಗ್ಗೆ ಭಾರತದೊಂದಿಗೆ ಗಡಿ ಕ್ಯಾತೆಯನ್ನು ತೆಗೆಯುತ್ತಿರುತ್ತದೆ. ಭಾರತ ಹಾಗೂ ಚೀನಾ ಗಡಿಯನ್ನು 1914 ರಲ್ಲಿ ಬ್ರಿಟೀಷ್ ಸರ್ಕಾರ ಗುರುತಿಸಿತ್ತು. ಆದರೆ ಈ ಗಡಿಯನ್ನು ಒಪ್ಪದ ಚೀನಾ ಭಾರತದ ಭೂಭಗದ ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿದೆ. 

ಅದೇ ರೀತಿ ಕೆಲದಿನಗಳ ಹಿಂದೆ ಸಿಕ್ಕಿಂ ಹಾಗೂ ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ಭಾರತದ ಸೈನಿಕರೊಂದಿಗೆ ಘರ್ಷಣೆಗೆ ಇಳಿದಿದ್ದರು.ಉಭಯ ದೇಶಗಳ ಸೈನಿಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಲಡಾಖ್ ನ ಪೂರ್ವ ಭಾಗದಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ 
5000 ಸೈನಿಕರನ್ನು ಚೀನಾ ಜಮಾವಣೆ ಮಾಡಿದೆ.

ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿ ಪ್ರದೇಶದಲ್ಲಿರುವ ಸೂಕ್ಷ್ಮ ಸ್ಥಳಗಳಾದ  ದೌಲತ್ ಬೇಗ್ , ಪ್ಯಾಂಗೋಂಗ್ ತ್ಸೋ ಸರೋವರ ಹಾಗೂ ಗಾಲ್ವಾನ್ ಕಣಿವೆಯಲ್ಲಿ  ಸೇನಾಬಲವನ್ನು ಹೆಚ್ಚಿಸಿಕೊಂಡಿದೆ.

ಪ್ಯಾಂಗೋಂಗ್ ತ್ಸೋ ಸರೋವರದ ಬಳಿ ಭಾರತದ ಸೈನಿಕರು ಹಾಗೂ ಚೀನಾ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಸಂಧರ್ಭದಲ್ಲಿ ಚೀನಾ ಸೈನಿಕರು ಭಾರತದ ಸೈನಿಕರ ಮೇಲೆ ದೊಣ್ಣೆ , ಕಲ್ಲು ಹಾಗೂ ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ. ಎರಡೂ ದೇಶದ ಸೈನಿಕರ ಬಳಿ ಶಸ್ತ್ರಾಸ್ತ್ರಗಳಿದ್ದರೂ ಯಾರೊಬ್ಬರು ಗುಂಡು ಹಾರಿಸುವುದಿಲ್ಲ...ಇದಕ್ಕೆ ಕಾರಣ 1967 ರಲ್ಲಿ ಏರ್ಪಟ್ಟ ಶಾಂತಿ ಒಪ್ಪಂದ..ಈ ಒಪ್ಪಂದದ ಅನ್ವಯ  ಗಡಿಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಉಭಯ ದೇಶಗಳ ಸೈನಿಕರು ಗುಂಡಿನ ದಾಳಿ ನಡೆಸುವಂತಿಲ್ಲ...1967 ರಿಂದ ಇಲ್ಲಿಯವರೆಗೂ ಒಮ್ಮೆಯೂ ಗುಂಡಿನ ಚಕಮಕಿ ನಡೆದಿಲ್ಲ.....