ತಾವರಗೇರಾ ಡಿಇಡಿ ಕಾಲೇಜಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ...
2007 - 2008 ನೇ ಸಾಲಿನ ಡಿಇಡಿ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ತಾವರಗೇರಾ ಶಿಕ್ಷಕರ ತರಬೇತಿ ಸಂಸ್ಥೇಯಲ್ಲಿ ಹಳೇಯ ವಿದ್ಯಾರ್ಥಿಗಳು ರವಿವಾರ ಏರ್ಪಡಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ತಾವರಗೇರಾ ಎಜ್ಯುಕೇಶನ್ ಅಸೋಸಿಯೇಷನ್ ಅಧ್ಯಕ್ಷ ಶೇಖರಗೌಡ ಪೋಲಿಸ್ ಪಾಟೀಲ, ಭೋದನೆ ಮಾಡುವ ಗುರುಗಳು ಶಿಷ್ಯರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳು ತಾವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು. ಗುರು & ಶಿಷ್ಯ ಸಂಬಂಧವು ಮುಖ್ಯವಾದುದು, ಗುರುಗಳು ಮಾಡುವ ಪಾಠ, ಬೋಧಿಸಿದ ತತ್ವವು ಅಳವಡಿಸಿಕೊಂಡು, ಜೋತೆಗೆ ಅವರ ನಡೆ ನುಡಿಗಳಲ್ಲಿ ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ ಅದರಿಂದ ಗುರುಗಳು ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಹಳೇಯ ವಿದ್ಯಾರ್ಥಿಗಳಾದ ಅಡಿವೆಪ್ಪ ಹನುಮಂತಪ್ಪ ಬೆಣ್ಣೆ,ಸುವರ್ಣ ಬಿಳೆಗುಡ್ಡ, ಹುಸೇನಸಾಬ ಭಾವಿಕಟ್ಟಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ವೇದಿಕೆ ಆಡಳಿತಾಧಿಕಾರಿ ಬಸನಗೌಡ ಪಾಟೀಲ್ ಹಾಗಲದಾಳ,ಸಂಸ್ಥೆಯ ಪ್ರಾಚಾರ್ಯ ಆರ್.ಜೆ.ಅಂಬಿಗೇರ,ನಾಗರತ್ನ ಪಾಟೀಲ,ನಿಂಬಮ್ಮ ತುಂಬರ, ಬಸವರಾಜ ಗುರಿಕಾರ, ಇಮ್ರಾನ್ ನಾಲಬಾಂದ್, ಮಲ್ಲಿಕಾರ್ಜುನ ಸೂಡಿ,ಕಾಮಣ್ಣ ಶಿರವಾರ, ಮಾರುತಿ ಬಿನ್ನಾಳ,ಎಸ್.ಎಸ್.ಗುಡದೂರ, ಪಂಪಾಪತಿ ಕೊರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಹಿಂದಿನ ಪ್ರಾಚಾರ್ಯ ಚೆನ್ನಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು.ಸೌಮ್ಯ ಭಂಡಾರಿ ಸ್ವಾಗತಿಸಿದರು,ಹನುಮಂತ ಬೆಣ್ಣೆ ನಿರೂಪಿಸಿದರು,ವೆಂಕೂಬಾ ಪೂಜಾರಿ ವಂದಿಸಿದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ.