ಬಾನಂಗಳದಲ್ಲಿ ಆರಂಭವಾದ ನೆರಳು ಬೆಳಕಿನ ಆಟ.......
ಬೆಂಗಳೂರು, ಡಿಸೆಂಬರ್ 26: ಸೌರವ್ಯೂಹ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಬಹಳ ಅಪರೂಪಕ್ಕೆ ಎಂಬಂತೆ ಕಾಣುವ ಕಂಕಣ ಸೂರ್ಯಗ್ರಹಣ ಈಗಾಗಲೇ ಸಂಭವಿಸಿದೆ.
8:06 ಕ್ಕೆ ಸಂಭವಿಸಿದ ಕಂಕಣ ಸೂರ್ಯಗ್ರಹಣ ಚಾಲ್ತಿಯಲ್ಲಿದೆ. ಮಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಪ್ರದೇಶಗಳಲ್ಲಿ ಕಂಕಣ ಸೂರ್ಯಗ್ರಹಣದ ದರ್ಶನವಾಗಿದೆ.
ಅಪರೂಪಕ್ಕೊಮ್ಮೆ ಸಂಭವಿಸುವ ಈ ಕಂಕಂಣ ಸೂರ್ಯಗ್ರಹಣವನ್ನು ವೀಕ್ಷಿಸಲು ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೋಲಾರ್ ಗಾಗಲ್ಸ್‌ಗಳು, ಟೆಲಿಸ್ಕೋಪ್‌ಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.
ಬೆಳಿಗ್ಗೆ 8:6 ಕ್ಕೆ ಪ್ರಾರಂಭದ ಕಂಕಣ ಸೂರ್ಯಗ್ರಹಣ ಬೆಳಿಗ್ಗೆ 11.11 ಕ್ಕೆ ಮುಕ್ತಾಯಗೊಳ್ಳಲಿದೆ. ಬೆಳಿಗ್ಗೆ 9 ರ ಸುಮಾರು ಇದರ ಪೂರ್ಣ ದರ್ಶನವಾಗಲಿದೆ. ಇದೊಂದು ಕಂಕಣ ಸೂರ್ಯಗ್ರಹಣವಾಗಿದ್ದು, ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ. ಈ ಸೂರ್ಯಗ್ರಹಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕಾಣಿಸಿಕೊಳ್ಳಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಶೇಕಡ 90 % ಕಂಡರೆ,ಉಳಿದ ಭಾಗದಲ್ಲಿ ಸಲ್ಪ ಪ್ರಮಾಣದಲ್ಲಿ ಕಾಣಲಿದೆ.