ಉಕ್ರೇನ್ ವಿಮಾನ ಪತನ :ಇರಾನ್ ಕೈವಾಡಕ್ಕೆ ಸಾಕ್ಷಿಕೊಟ್ಟ ಅಮೆರಿಕ.....!!

 

ಉಕ್ರೇನ್‌ನ ಜೆಟ್‌ಲೈನರ್ ವಿಮಾನ ಪತನ ಪ್ರಕರಣದಕ್ಕೆ ತಿರುವು ಸಿಕ್ಕಿದೆ. ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿದೆ.

 

ಜನವರಿ 8ರಂದು ಇರಾನ್‌ನಲ್ಲಿ ಟೆಹರಾನ್‌ನಿಂದ ಉಕ್ರೇನ್‌ಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪತನಗೊಂಡಿತ್ತು. 168 ಪ್ರಯಾಣಿಕರು ಮತ್ತು 9 ಸಿಬ್ಭಂದಿಗಳು ಮೃತಪಟ್ಟಿದ್ದರು.

 

ಅಮೆರಿಕ ಇರಾನ್ ಈ ವಿಮಾನ ಪತನದ ಹಿಂದಿದೆ ಎಂದು ಆರೋಪಿಸಿದೆ. ವಿಮಾನ ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಎರಡು ಕ್ಷಿಪಣಿಗಳನ್ನು ಇರಾನ್ ಹಾರಿಸಿದೆ ಎಂದು ಅಮೆರಿಕ ಹೇಳಿದೆ. ಇದನ್ನು ಉಪಗ್ರಹದ ಕ್ಯಾಮರಾಗಳು ಸೆರೆ ಹಿಡಿದಿವೆ ಎಂದು ಸಾಕ್ಷಿಯನ್ನು ನೀಡಿದೆ.

 

ಉಕ್ರೇನ್ ವಿಮಾನ ವಿಮಾನ ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವೇಳೆ ಪತನಗೊಂಡು ಬೆಂಕಿಗೆ ಆಹುತಿಯಾಗಿದೆ ಎಂದು ಗುರುವಾರ ಇರಾನ್ ವರದಿ ಬಿಡುಗಡೆ ಮಾಡಿತ್ತು. ವಿಮಾನ ಪನತಗೊಂಡ ದಿನವೇ ಇರಾನ್ ಇರಾಕ್‌ನ ಅಮೆರಿದ ಸೇನಾ ನೆಲೆ ಗುರಿಯಾಗಿಸಿಕೊಂಡು  ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಿತ್ತು.

 

ಆಕಸ್ಮಿಕವಾಗಿ ದಾಳಿ

 

 

ಇರಾನ್ ಆಕಸ್ಮಿಕವಾಗಿ ಉಕ್ರೇನ್ ವಿಮಾನದ ಮೇಲೆ ದಾಳಿ ಮಾಡಿದೆ. ಇದರಿಂದಾಗಿ 168 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ. ಉಕ್ರೇನ್ ವಿಮಾನ ಪತನದ ಕುರಿತು ತನಿಖೆಯನ್ನು ಆರಂಭಿಸಿದ್ದು, ಗುರುವಾರ ಇರಾನ್‌ಗೆ ಅಧಿಕಾರಿಗಳ ನಿಯೋಗ ಭೇಟಿ ಕೊಟ್ಟಿದೆ.

 

 

ಇರಾನ್ ಹೇಳುವುದೇನು?

 

 

ಪತನಗೊಳ್ಳುವ ಮುನ್ನ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂದು ಇರಾನ್ ಹೇಳಿದೆ. ಕ್ಷಿಪಣಿ ದಾಳಿಯ ಹಿನ್ನಲೆಯಲ್ಲಿ ವಿಮಾನ ಪತನಗೊಂಡಿದೆ ಎಂಬ ಉಕ್ರೇನ್ ವಾದವನ್ನು ಇರಾನ್ ತಳ್ಳಿ ಹಾಕಿದೆ.