ಏನ್ ಬೇಕಾದ್ರೂ ಮಜಾ ಮಾಡಿ, ಆದ್ರೆ ಚುಡಾಯಿಸಿದ್ರೆ ಹುಷಾರ್: ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ನಡೆದಿದೆ. ಕಾಸ್ಮೊಪೊಲಿಟನ್ ಸಿಟಿ ಎನಿಸಿರುವ ಬೆಂಗಳೂರಿನ ನಿವಾಸಿಗಳಿಗೆ ಹೊಸ ವರ್ಷದ ಸಂಭ್ರಮಾಚರಣೆಯೇ ಒಂದು ವಿಶೇಷ. ಕುಣಿದು ಕುಪ್ಪಳಿಸುವವರು, ಕುಡಿದು ತೂರಾಡುವವರು ಇವತ್ತು ಮಧ್ಯರಾತ್ರಿ ಎಲ್ಲೆಡೆ ಕಾಣಸಿಗುತ್ತಾರೆ. ಅದರಲ್ಲೂ ಎಂಜಿ ರಸ್ತೆ, ಕೋರಮಂಗಲ, ಯಲಹಂಕದಂತಹ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯ ತೀರಾ ಸಾಮಾನ್ಯ. ಹಿಂದಿನ ಕೆಲ ವರ್ಷಗಳಲ್ಲಿ ಸಂಭ್ರಮಾಚಾರಣೆಯ ನೆಪದಲ್ಲಿ ಕೆಲ ಕಿಡಿಗೇಡಿಗಳು ಅಸಭ್ಯ ವರ್ತನೆ ತೋರಿದ್ದಿದೆ. ಇದು ರಾಷ್ಟ್ರಾದ್ಯಂತ ಸುದ್ದಿಯಾಗಿ ಬೆಂಗಳೂರಿನ ಬಗ್ಗೆ ಕೆಟ್ಟ ಹೆಸರು ತಂದುಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅದರಲ್ಲೂ ಮಹಿಳೆಯರ ಭದ್ರತೆಗೆ ಸಾಕಷ್ಟು ನಿಗಾ ವಹಿಸಲಾಗಿದೆ.
ಇನ್ನು ಪೋಲೀಸ್ ಕಮಿಷನರ್ ಭಾಸ್ಕರ್ ರಾವ್ ಅಸಭ್ಯ ವರ್ತನೆ ತೋರುವವರಿಗೆ ಎಚ್ಚರಿಕೆ ನೀಡಿದ್ದು ಎನ್ ಬೇಕಾದ್ರು ಮಜಾ ಮಾಡಿ ಆದ್ರೆ ಚುಡಾಯ್ಸಿದ್ರೇ ಹುಷಾರ್..ಅಂಥವರ ವಿರುದ್ಧ ಕಠಿಣ ಕ್ರಮ ಕೈಗೋಳ್ಳಲಾಗುವುದು ಎಂದು ಹೇಳಿದ್ದರೆ.