ಉತ್ತರ ಕರ್ನಾಟಕವನ್ನ ನಿರ್ಲಕ್ಷಿಸಲಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ
ಬೆಳಗಾವಿ (Dec.31) : 2002 ರಲ್ಲಿ ಸಲ್ಲಿಸಿದ ನಂಜುಡಪ್ಪ ವರದಿ ಪ್ರಕಾರ ಮುಂದಿನ 8 ವರ್ಷಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ 31 ಸಾವಿರ ಕೋಟಿ ಅನುದಾನವನ್ನ ಶಿಫಾರಸ್ಸು ಮಾಡಲಾಗಿತ್ತು ಅದರಲ್ಲಿ 15 ಸಾವಿರ ಕೋಟಿಯನ್ನ ಸರ್ಕಾರದ ಕಾರ್ಯಕ್ರಮಗಳಿಗೆ ಮೀಸಲಿಟ್ಟು ಉಳಿದ 16 ಸಾವಿರ ಕೋಟಿಯನ್ನ ಪ್ರತಿ ವರ್ಷ 2 ಸಾವಿರ ಕೋಟಿಯಂತೆ ಮುಂದಿನ 8 ವರ್ಷಕ್ಕೆ ವಿಶೇಷ ಅನುದಾನವಾಗಿ ಮಂಜೂರು ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು ಆದರೆ ಅದು ಜಾರಿಗೆ ಬಂದಿದ್ದು 2007-2008 ರಲ್ಲಿ ಇದು ಮುಗಿದಿದ್ದು 2016-2017 ರಲ್ಲಿ ಆದರೆ ನಾನು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸರ್ಕಾರ ವರ್ಷಕ್ಕೆ 3 ಸಾವಿರ ಕೋಟಿಯಂತೆ ಈ ವಿಶೇಷ ಅನುದಾನವನ್ನ ಮುಂದುವರೆಸಿಕೊಂಡು ಬಂದಿತ್ತು. ಆದರೆ ಇಲ್ಲಿಯವರೆಗೆ ನಂಜುಡಪ್ಪ ವರದಿಯ ಮೇಲೆ ಈ ಸರ್ಕಾರ ಬಿಡುಗಡೆ ಮಾಡಿದ್ದು 29942.25 ಕೋಟಿ ಆದರೆ ಖರ್ಚು 28 ಸಾವಿರದ 80 ಕೋಟಿ 34 ಲಕ್ಷ ಮಾತ್ರ.
ಕಲ್ಯಾಣ ಕರ್ನಾಟಕ ಆದಮೇಲೆ KKRDB ಅನುಷ್ಠಾನ ಮಾಡಿಲಾಯಿತು ಅದು ಜಾರಿಗೆ ಬಂದ ಮೇಲೆ cabinet minister ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದು, ಎರಡು ವರ್ಷದಿಂದ ಕಲ್ಯಾಣ ಕರ್ನಾಟಕ ಹೆಸರು ಮಾತ್ರ ಇದೆ ಆದರೆ ಯಾವುದೇ ಕಾರ್ಯ ನಿರ್ವಹಿಸ್ತಾಯಿಲ್ಲ. ಹಂಚಿಕೆಯಾದ ಅನುದಾನ 1492ಸಾವಿರ ಕೋಟಿ, ಸರ್ಕಾರ ಮಂಡಳಿಗೆ ನೀಡಿದ್ದು 415ಸಾವಿರ ಕೋಟಿ, ಖರ್ಚು 620 ಸಾವಿರ ಕೋಟಿ. Hyderbad Karnataka ಸಂಪೂರ್ಣ ನಿರ್ಲಕ್ಷ್ಯ ಆಗಿದೆ, ನಾವು ಇರುವಾಗ 30 ಸಾವಿರ ಹುದ್ದೆ ಕೊಟ್ಟಿದ್ದಿವಿ. ನೀವು ಬಂದಮೇಲೆ ಒಂದು ಹುದ್ದೆ ಸಹ ಮಾಡಿಲ್ಲ. 2021-2022 ಕ್ಕೆ allocate ಆಗಿರದು ಒಂದೂವರೆ ಸಾವಿರ ಕೋಟಿ, release ಆಗಿರದು 378 ಕೋಟಿ. ಇದುವರೆಗೆ ಒಂದು ಹುದ್ದೆನು ಬರ್ತಿ ಮಾಡಿಲ್ಲ, ಅದನ್ನು ಜಾರಿಗೆ ತರುವ ಪ್ರಯತ್ನ ಸಹ ಮಾಡಿಲ್ಲ, ಇವ್ರು ಉತ್ತರ ಕರ್ನಾಟಕನ ಅಭಿವೃದ್ದಿ ಮಾಡ್ತಾರಾ. ಎಲ್ಲರ ಗಮನ ಬೇರೆ ಕಡೆ ಸೆಳೆಯೋಕೆ ಬಲವಂತದ ಮತಾಂತರ ನಿಷೇಧ ಕಾಯ್ದೆ ತಂದಿದ್ದಾರೆ, ಈ ರೀತಿಯಾಗಿ ಹೈದರಬಾದ ಕರ್ನಾಟಕದ ಸಮಸ್ಯೆಯನ್ನು ನಿರ್ಲಕ್ಷ್ಯಸಿದ್ದಾರೆ. ಯಾವುದೇ ಅಭಿವೃದ್ಧಿ ಕಂಡಿಲ್ಲ, ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಾವಣೆ ಮಾಡಿರೋದೆ ಇಲ್ಲಿವರೆಗಿನ ಸಾಧಾನೆ ಎಂದು ಟೀಕೆ ಮಾಡಿದ ಸಿದ್ದರಾಮಯ್ಯ.
1.5 ಲಕ್ಷ ಕೋಟಿ ನೀರಾವರಿ ಯೋಜನೆ ಖರ್ಚು ಮಾಡ್ತೀವಿ ಅಂತ ಹೇಳಿದ್ದ ಬಿಜೆಪಿ ಸರ್ಕಾರ, ಎರಡು ವರ್ಷದಲ್ಲಿ ಖರ್ಚು ಮಾಡಿರದು 3 ಸಾವಿರದ 626 ಕೋಟಿ.̧
8-9ರಿಂದ 12-13 ರವರೆಗೆ ನೀರಾವರಿ ನಿಗಮಕ್ಕೆ 8 ಸಾವಿರದ 861.68 ಕೋಟಿ, ವಿಶ್ವೇಶ್ವರ ಜಲ ನಿಗಮಕ್ಕೆ 578.2 ಕೋಟಿ, ಕೃಷ್ಣ ಭಾಗ್ಯ ಜಲ ನಿಗಮಕ್ಕೆ 4ಸಾವಿರದ 88 ಕೋಟಿ, ಕಾವೇರಿ ನೀರಾವರಿ ನಿಗಮಕ್ಕೆ 4ಸಾವಿರದ 305 ಕೋಟಿ. ಐದು ವರ್ಷದಲ್ಲಿ ಖರ್ಚು ಮಾಡಿರದು 17 ಸಾವಿರದ 734 ಕೋಟಿ. ವರ್ಷಕ್ಕೆ 30 ಸಾವಿರ ಕೋಟಿ ಖರ್ಚು ಮಾಡಿದ್ದ ವಾದ ನಿಬಾಯಿಸದ ಬಿಜಿಪಿ ಸರ್ಕಾರ ಎಂದು ಆರೋಪಿಸಿದ ಸಿದ್ದರಾಮಯ್ಯ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿ, ವೀರಾವೇಶದಿಂದ ನೀವು ಅಷ್ಟೂ ಅನುದಾನ ಖರ್ಚು ಮಾಡಿದರೆ, ಈ ವರ್ಷ ರೂ. 3,000 ಕೋಟಿ ಅನುದಾನ ಕೊಡುತ್ತೇನೆ ಎಂದರು.
— Siddaramaiah (@siddaramaiah) December 24, 2021
ಎಲ್ಲಿದೆ ಹಣ? 11/17#Session