ಮೋದಿಗೆ ಮರೆಯಾದ ಕಂಕಣ ಸೂರ್ಯ ಗ್ರಹಣ......
ನವದೆಹಲಿ : ಇಂದು ಬಾನಂಗಳದಲ್ಲಿ ಸಂಭವಿಸಿದ ಅಪರೂಪದ ಕಂಕಣ ಸೂರ್ಯ ಗ್ರಹಣವನ್ನು ಪ್ರಧಾನಿ ಮೋದಿ ಮಿಸ್ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆಯೇ ತಮ್ಮ ಅಧಿಕೃತ ನಿವಾಸದ ಆವರಣದಿಂದ ಕಣ್ಣಿಗೆ ಸುರಕ್ಷಿತ ಸಾಧನ ಅಳವಡಿಸಿಕೊಂಡು ಆಗಸದತ್ತ ಸೂರ್ಯಗ್ರಹಣ ನೋಡಲು ಮೋದಿ ಸಿದ್ಧರಾದರು.
ಆದರೆ, ರಾಜಧಾನಿ ಮೇಲೆ ಮೋಡ ಮುಸುಕಿದ ವಾತಾವರಣ ಕವಿಯಿತು. ಇದರಿಂದ ಅವರಿಗೆ ಸೂರ್ಯ ಅಸ್ಪಷ್ಟವಾಗಿ ಗೋಚರಿಸಿದ. ಬಳಿಕ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದ ಕಂಕಣ ಸೂರ್ಯಗ್ರಹಣದ ಕೌತುಕ ದೃಶ್ಯವನ್ನು ಲೈವ್‍ಸ್ಟ್ರೀಮ್ (ನೇರ ಪ್ರಸಾರ) ಮೂಲಕ ಕಣ್ಮುಂಬಿಕೊಂಡರು.
ಇನ್ನು ಈ ಕುರಿತು ಟ್ವಿಟ್ ಮಾಡಿರುವ ಮೋದಿ "ಎಲ್ಲರಂತೆ ನಾನು ಕೂಡ ಸೌರ ಗ್ರಹಣದ ಕುತೂಹಲ ವೀಕ್ಷಿಸಲು ಸಿದ್ಧನಾದೆ. ಆದರೆ, ದೆಹಲಿಯಲ್ಲಿ ಮೋಡ ಕವಿದಿತ್ತು.ಹೀಗಾಗಿ ನಾನು ದೇಶದ ಇತರ ಭಾಗಗಳಲ್ಲಿ ಘಟಿಸಿದ ಸೂರ್ಯಗ್ರಹಣವನ್ನು ಲೈವ್‍ಸ್ಟ್ರೀಮ್ ಮೂಲಕ ವೀಕ್ಷಿಸಿ ಬೆರಗಾಗಿದ್ದೇನೆ " ಎಂದು ಬರೆದುಕೊಂಡಿದ್ದಾರೆ.
ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಬೆಳಗ್ಗೆ 8.04ನಿಮಿಷಕ್ಕೆ ಆರಂಭವಾಗಿದ್ದು, 11.15ನಿಮಿಷಕ್ಕೆ ಮುಕ್ತಾಯವಾಗಿತ್ತು.