ಈ ಬಾರಿ ಮಿನಿ ಬಜೆಟ್ ಬಂಪರ್.. ಕುತೂಹಲ ಕೆರಳಿಸುವ 2020 ಕೇಂದ್ರ ಬಜೆಟ್..
ನವದೆಹಲಿ: ಈ ವರ್ಷದ ಮೊದಲ ಬಜೆಟ್ ಶುಕ್ರವಾರ ಪ್ರಾರಂಭವಾಗಲಿದೆ. ಇದು, ಭಾರತದ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ಆರಂಭಕ್ಕೂ ಮೊದಲು ಮಾದ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ಪ್ರಧಾನಿ, ʼಹಣಕಾಸು ಸಚಿವೆ ಸೀತಾರಾಮನ್ ಅವರು 2020ನೇ ವರ್ಷದಲ್ಲಿ ಪ್ಯಾಕೆಜ್ ಸ್ವರೂಪದಲ್ಲಿ ನಾಲ್ಕು-ಐದು ಮಿನಿ ಬಜೆಟ್ ನೀಡಿದ್ದಾರೆ. ಮುಂದೆ ಮಂಡಿಸಲಿರುವ ಬಜೆಟ್ ಕೂಡಾ ಇದರ ಭಾಗವಾಗಿರುತ್ತದೆʼ ಎಂಬುದನ್ನು ವ್ಯಕ್ತಪಡಿಸಿದರು.
ಈ ವರ್ಷವನ್ನು ಗಮನದಲ್ಲಿಟ್ಟುಕೊಂಡು ಭಿನ್ನ ಕಲಾಪಗಳಲ್ಲಿ ಚರ್ಚೆ ನಡೆಯಲಿವೆ. ಜನರ ಬೇಡಿಕೆಗಳ ಈಡೇರಿಕೆಗೆ ಸಂಸದರು ಈ ಅಧಿವೇಶನವನ್ನೂ ಪೂರ್ತಿಯಾಗಿ ಬಳಸಬೇಕೆಂದು ಸಲಹೆ ನೀಡಿದರು.
ಬಹುಶಃ ಇಡೀ ದೇಶದಲ್ಲೇ ಮೊದಲ ಬಾರಿಗೆ ಹಣಕಾಸು ಸಚಿವರು 2020ರ ಸಾಲಿನಲ್ಲಿ 4-5 ಮಿನಿ ಬಜೆಟ್ ಗಳನ್ನು ನೀಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ವರದಿ : ನವಿತ ನಾಯಕ್