ಹುಟ್ಟುಹಬ್ಬದ ಕಾರ್ಯಕ್ರಮಕ್ಕೆಂದು ಹೋದ ಯುವತಿ ವಾಪಸ್ ಬರಲೇ ಇಲ್ಲ: ಏನಿದು? ಸ್ಟೋರಿ
ಒಡಿಶಾ ಜಿಲ್ಲೆಯ ಕೌಖಿಯಾ ಪೋಲಿಸ್ ಠಾಣೆಯ ಸಮೀಪದಲ್ಲಿರುವ ಮುಲಪಾಲದ ರಸ್ತೆಯ ಪಕ್ಕದಲ್ಲಿ ಯುವತಿಯ ಮೃತ ದೇಹ ಅಚಾನಕ್ಕಾಗಿ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನ ಹುಟ್ಟಿಸುವಂತಿದೆ. ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಕಮಿಷನರ್ ಮಾರ್ಗದರ್ಶನದ ಮೇರೆಗೆ ಪೊಲೀಸರು ಸುಂದರ್ ಪಾದ್ ಸ್ಥಳದಲ್ಲಿ ಆರೋಪಿಯ ಮೇಲೆ ದಾಳಿ ನಡೆಸಿದ್ದರು. ಕೊಲೆಯಾದ ಯುವತಿಯನ್ನು ಜಾರಫುಲಾ ನಾಯಕ್ ಎಂದು ಗುರುತಿಸಲಾಗಿದ್ದು, ಬಂಧಿತವಾದ ಆರೋಪಿಯ ಹೆಸರು ರಾಕೇಶ್ ಎನ್ನುವುದು ತನಿಖೆಯ ವೇಳೆ ಗೊತ್ತಾಗಿದೆ. ಜಾಜಪುರ್ ಪೊಲೀಸ್ ಸ್ಟೇಷನ್ ನ ವಶದಲ್ಲಿರುವ ರಾಕೇಶ್ ನನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಬಲೆಗೆ ಸೆರೆಯಾದ ಆರೋಪಿ
ಜಾರಫುಲ್ ಹುಡುಗಿ ಮಯೂರ್ ಬಂಜೆ ಊರಿನ ನಿವಾಸಿಯಾಗಿದ್ದು, ಆರ್ ಡಿ ಮಹಿಳಾ ಯೂನಿವರ್ಸಿಟಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿಯನ್ನು ಭುವನೇಶ್ವರಿ ನಗರದಲ್ಲಿ ಕೊಲೆ ಮಾಡಿದ್ದಾರೆ. ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಹೋಗಿದ್ದ ರಾಕೇಶ್ ಪೋಲಿಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಮೃತ ಪಟ್ಟ ಯುವತಿಯ ದೇಹವನ್ನು, ತನ್ನ ಸ್ನೇಹಿತನೊಂದಿಗೆ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಮಲುಪಾಲಾದ ಪ್ರದೇಶದಲ್ಲಿ ಬಿಸಾಡಿದ್ದರು. ಪೊಲೀಸರು ಬೀಸಿದ್ದ ಬಲೆಗೆ ರಾಕೇಶ್ ಮಾತ್ರ ಸೆರೆಯಾಗಿದ್ದು, ಇವನ ಸ್ನೇಹಿತ ಕಾಣೆಯಾಗಿದ್ದಾನೆ. ಸ್ನೇಹಿತನಿಗಾಗಿ ಆರಕ್ಷಕರು ಶೋಧ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ.
ಖಾಸಗಿ ಬಸ್ ಮೂಲಕ ಮನೆಗೆ ಬರಬೇಕಿತ್ತು
ಜನವರಿ 24 ರಂದು ನನ್ನ ಮಗಳು, ತನ್ನ ಚಕ್ರದಾರ್ ಟೀಚರ್ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆಂದು ಊರಿಗೆ ಹೋಗಿದ್ದಳು. 25 ತಾರೀಖಿನಂದು ಹುಟ್ಟು ಹಬ್ಬದ ಕಾರ್ಯಕ್ರಮ ನಡೆದಿದ್ದು, ಚಕ್ರದಾರ್ ನನ್ನ ಮಗಳನ್ನು ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದರು. ಖಾಸಗಿ ಬಸ್ ಮೂಲಕ ಜಲಫುಲಾ ಊರಿಗೆ ತಲುಪಬೇಕಿತ್ತು. ನನಗೆ ಹೊಟ್ಟೆ ನೋವಿದೆ, ಆಸ್ಪತ್ರೆಗೆ ಭೇಟಿ ನೀಡಿ ಆಮೇಲೆ ಬಸ್ ಹತ್ತುತ್ತೇನೆ ಎಂದು ಕರೆ ಮಾಡಿ ಹೇಳಿದ್ದಳು.
ನನ್ನ ಮಗಳು ಕರೆ ಸ್ವೀಕರಿಸಲಿಲ್ಲ
ಸ್ವಲ್ಪ ಸಮಯದ ನಂತರ ಕರೆ ಮಾಡಿ , ನಾನು ವಿಪರೀತ ಹೊಟ್ಟೆ ನೋವಿನಿಂದ ನರಳುತ್ತಿದ್ದೇನೆ ಸ್ನೇಹಿತೆಯರ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಬರುತ್ತೇನೆ ಎಂದು ತಿಳಿಸಿದಳು. ಎಷ್ಟು ಹೊತ್ತು ಕಾದರೂ, ಮಗಳು ಮನೆಗೆ ಬರಲೇ ಇಲ್ಲ, ಫೋನ್ ಮಾಡಿದರು ಸಹ ಫೋನ್ ಎತ್ತಲಿಲ್ಲ.ಭುವನೇಶ್ವರಿ ಪ್ರದೇಶದಲ್ಲಿ ಚಕ್ರಧಾರ್ ಒಬ್ಬರೇ ನನ್ನ ಮಗಳನ್ನು ಕಣ್ಗಾವಲಾಗಿ ಕಾದಿದ್ದರು ಎಂದು ಕೊಲೆಯಾದ ಯುವತಿಯ ತಂದೆ ರಾಮಕಾಂತ್ ಹೇಳಿದ್ದಾರೆ. ಮುಂದಿನ ದಿನ 27 ರಂದು ಮೃತ ದೇಹದ ಪಕ್ಕ ಒಂದು ಬ್ಯಾಗ್ ಬಿದ್ದಿತ್ತು. ಬ್ಯಾಗ್ ನಲ್ಲಿ ವಿಳಾಸದ ಮಾಹಿತಿ ಸಿಕ್ಕಿದ್ದು, ತಕ್ಷಣವೇ ಪೊಲೀಸರು ಯುವತಿಯ ಕುಟುಂಬಸ್ಥರಿಗೆ ವಿಷಯವನ್ನು ತಿಳಿಸಿದ್ದಾರೆ.
ಬರಹ: ಹೆಚ್.ಶ್ರೀಹರ್ಷ