ಅಣ್ಣಯ್ಯ ನಾದ ರಜನಿಕಾಂತ್
ರಜನಿಕಾಂತ್ ಅಭಿನಯದ ಹೊಸ ಸಿನಿಮಾಗೆ ಅಣ್ಣ ತೆ
ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಅರ್ಥ ಅಣ್ಣಯ್ಯ.
90ರ ದಶಕದಲ್ಲಿ ರಜನಿಕಾಂತ್ ಸಿನಿಮಾಗಳಲ್ಲಿ ನಾಯಕಿಯರಾಗಿ ಮಿಂಚುತ್ತಿದ್ದ ನಟಿಯರಾದ ಮೀನ ಮತ್ತು ಖುಷ್ಬೂ ಈ ಅಣ್ಣಾ ತೆ ಯಲ್ಲಿದ್ದಾರೆ. ದಕ್ಷಿಣ ಭಾರತದಲ್ಲಿ ಬಹಳ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರಾದ ನಯನತಾರಾ, ಕೀರ್ತಿ ಸುರೇಶ್ ಕೂಡ ಈ ಸಿನಿಮಾದಲ್ಲಿ ಇದಾರೆ. ಪ್ರಕಾಶ್ ರೈ, ಸೂರಿ ಸತೀಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದಾರೆ. ವೆಟ್ರಿ ಛಾಯಾ ಗ್ರಹಣ ಮಾಡುತ್ತಿದ್ದರೆ, ಡಿ . ಇನ್ನು ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಇದು ಒಂದು ಪೂರ್ಣ ಫ್ಯಾಮಿಲಿ ಚಿತ್ರ ವಾಗಿದು ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ವಿಶ್ವಾಸo ಮಾಡಿದ್ದ ಶಿವ, ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಿದರು. ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಹಾಗಾಗಿ, ರಜನಿ ಶಿವ ಕಾಂಬಿನೇಷನ್ ನಲ್ಲಿ ಅಂಥದೇ ಇನ್ನೊಂದು ಸಿನಿಮಾ ಮೂಡಿಬರಲಿದೆ ಎಂಬllp ನಿರೀಕ್ಷೆ ಇದೆ.