ರಕ್ಷಿತ್ ಶೆಟ್ಟಿಗೆ ಬಂಧನದ ಭೀತಿ : ಸರಣಿ ಟ್ವಿಟ್ ಮಾಡಿದ ಸಿಂಪಲ್ ಸ್ಟಾರ್..
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ 9 ನೇ ಎಸಿಎಂಎಂ ಕೋರ್ಟು ಬಂಧನ ವಾರಂಟ್ ಜಾರಿ ಮಾಡಿದ್ದು, ಈ ವಿವಾದದ ಬಗ್ಗೆ ರಕ್ಷಿತ್ ಸರಣಿ ಟ್ವಿಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡೊಂದನ್ನು ಬಳಸಲಾಗಿದೆ ಎಂದು ಲಹರಿ ಸಂಸ್ಥೆ ನೀಡಿದ್ದ ದೂರಿನನ್ವಯ ಕೃತಿ ಚೌರ್ಯ ಪ್ರಕರಣ ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ.
ಆದರೆ ಈ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ರಕ್ಷಿತ್ ಈ ಪ್ರಕರಣ ಕಿರಿಕ್ ಪಾರ್ಟಿ ಬಿಡುಗಡೆ ಸಂದರ್ಭದಲ್ಲೇ ಕೇಸು ದಾಖಲಾಗಿ ಅದನ್ನು ನಾವು ಸಿವಿಲ್ ಮತ್ತು ಹೈ ಕೋರ್ಟ್ ಮೂಲಕ ಜಯವನ್ನೂ ಪಡೆದಿದ್ದೆವು. ಅದರ ಸಂಬಂಧ ಮತ್ತೆ ಈಗ ದೂರು ನೀಡುವ ಅಗತ್ಯವೇನಿತ್ತು. ವಿಶೇಷವೆಂದರೆ ಈ ದೂರನ್ನು ಆರು ತಿಂಗಳ ಹಿಂದೆ ದಾಖಲಿಸಲಾಗಿದೆ. ಆದರೆ ನಮಗೆ ಅಥವಾ ನಮ್ಮ ಲಾಯರ್ ಗೆ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಯಾಕೆ?
ಅಂದು ಕಿರಿಕ್ ಪಾರ್ಟಿ ರಿಲೀಸ್ ಆಗುವ ಹಿಂದಿನ ದಿನ ಈ ಪ್ರಕರಣ ದಾಖಲಾಗಿತ್ತು. ಆಗ ನಾವು ನಮ್ಮ ಹಾಡನ್ನು ಮರಳಿ ಪಡೆಯಲು ಕೋರ್ಟ್ ನಲ್ಲಿ ಹೋರಾಡಬೇಕಾಗಿತ್ತು. ಅದೃಷ್ಟವಶಾತ್ ಕೋರ್ಟ್ ನಲ್ಲಿ ಜಯಗಳಿಸಿ ಎರಡನೇ ವಾರದಿಂದ ಈ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡಿದ್ದೆವು. ಒಂದು ವರ್ಷದ ಬಳಿಕ ನಾವು ಕೋರ್ಟ್ ಕೇಸ್ ನಲ್ಲಿ ಜಯಗಳಿಸಿದ್ದೆವು. ಇದೆಲ್ಲವೂ ನಮಗೆ ಹೊಸ ಅನುಭವವಾಗಿತ್ತು. ಇದೆಲ್ಲಾ ಯಾಕಾಗಿ ಎಂದು ಗೋತಾಗುತ್ತಿಲ ಎಂದು ರಕ್ಷಿತ್ ಸುದೀರ್ಘವಾಗಿ ಹೇಳಿದ್ದಾರೆ.