ರಾಜ್ಯದ ಮೊದಲ ಸಂಚಾರಿ ಡೀಸೆಲ್ ಬಂಕ್ ಗೆ ಚನ್ನರಾಯಪಟ್ಟಣದಲ್ಲಿ ಚಾಲನೆ
ರಾಜ್ಯದ ಮೊದಲ ಸಂಚಾರಿ ಡೀಸೆಲ್ ಬಂಕ್‌ಗೆ ಚನ್ನರಾಯಪಟ್ಟಣದಲ್ಲಿ ಚಾಲನೆ
ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಡೀಸೆಲ್ ಬಂಕ್‌ಗೆ ತಾಲೂಕಿನಲ್ಲಿ ಚಾಲನೆ ದೊರೆತಿದ್ದು, ಮನೆ ಬಾಗಿಲಿನಲ್ಲೇ ಮಾರುಕಟ್ಟೆ ದರದಲ್ಲೇ ಡೀಸೆಲ್ ದೊರಕಲಿದೆ. ಹೊಸ ವರ್ಷದ ಕೊಡುಗೆಯಾಗಿ ಯೋಜನೆಯನ್ನು ಭಾರತ್ ಪೆಟ್ರೋಲಿಯಂ ಕಾರ‌್ಯರೂಪಕ್ಕೆ ತಂದಿದೆ.
ರಾಜ್ಯದಲ್ಲಿ ಕೇವಲ ಎರಡು ಸಂಚಾರಿ ಡೀಸೆಲ್ ಬಂಕ್‌ಗಳಿಗೆ ಅವಕಾಶ ನೀಡಿದ್ದು, ಮೊದಲು ಚನ್ನರಾಯಪಟ್ಟಣದಲ್ಲಿ ಆರಂಭವಾಗಿದೆ.
ರಾಜ್ಯಾದ್ಯಂತ ಸಂಚರಿಸಿ ಡೀಸೆಲ್ ಸರಬರಾಜು ಮಾಡುವ ಅವಕಾಶವಿದ್ದು, ಕ್ಯಾನ್‌ಗಳಲ್ಲಿ ಡೀಸೆಲ್‌ಗಳನ್ನು ತೆಗೆದು ಕೊಂಡು ಹೋಗುವಾಗ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಹೊಂದಲಾಗಿದೆ.
6 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಅನ್ನು ಸಂಚಾರಿ ಡೀಸೆಲ್‌ಬಂಕ್ ಆಗಿ ಪರಿವರ್ತಿಸಿದ್ದು, ರೆಪೋಸ್ (ಖಇಔ) ಆ್ಯಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮಗೆ ಬೇಕಾದ ಕಡೆಗೆ ಡೀಸೆಲ್ ತರಿಸಿಕೊಳ್ಳಬಹುದು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ‌್ಯದರ್ಶಿ ಶ್ರೀಶಂಭುನಾಥ ಸ್ವಾಮೀಜಿ, ನೂತನ ಸಂಚಾರಿ ಡೀಸೆಲ್ ಬಂಕ್‌ಗೆ ಚಾಲನೆ ನೀಡಿದರು.