ರಾಜಧಾನಿಯಲ್ಲಿ ನಡೆಯಲಿರುವ ಪ್ರಮುಖ ಕಾರ್ಯಕ್ರಮಗಳು.....

 

ಬೆಂಗಳೂರು, ಜನವರಿ 4: ರಾಜಧಾನಿ ಬೆಂಗಳೂರಿನಲ್ಲಿ ಇಂದು ನಡೆಯಲಿರುವ ಪ್ರಮುಖ ಕಾರ್ಯಕ್ರಮಗಳ ವಿವರ ಇಂತಿದೆ.

ತೀವ್ರ ಕುತೂಹಲ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಜೀವನ ಚರಿತ್ರೆ 'ಕೃಷ್ಣಪಥ' ಇಂದು ಬಿಡುಗಡೆಯಾಗಲಿದೆ.

ಈ ಪುಸ್ತಕದಲ್ಲಿ ಎಸ್‌ಎಂ ಕೃಷ್ಣ ರಾಜಕೀಯ ಹಾದಿ ಹಾಗೂ ಅವರ ಎದುರಾಳಿಗಳ ಕುರಿತು ಸಾಕಷ್ಟು ವಿಚಾರಗಳು ದೊರೆಯಲಿದೆ. ಆದಿ ಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

ಯಾದಗಿರಿ ಶ್ರೀರಾಮಕೃಷ್ಣ ಆಶ್ರಮದ ಮುಕದಾನಂದ ಮಹಾರಾಜ್, ಸ್ಮೃತಿ ವಾಹಿನಿ ಜತೆ ಐದು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿಚಾರ ಸಂಕಿರಣ, ವಿಷಯ ಮಂಡನೆ- ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂದಿಲ್, ಕಾನೂನು ಪ್ರಾಧ್ಯಾಪಕ ಬಾಬು ಮ್ಯಾಥ್ಯೂ, ಅಂಕಣಕಾರ ರಘು, ವಕೀಲ ಮೋಹನ್ ಕುಮಾರ್, ಸ್ಥಳ-ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣ, ಅರಮನೆ ರಸ್ತೆ, ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

 

 

ಅಲೆಮಾರಿ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳು: ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿನಿಧಿಯು, ಅಲೆಮಾರಿ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳು ಸಮಾಲೋಚನಾ ಸಮಾರಂಭ ಹಾಗೂ ಮಹಿಳಾ ಘಟಕ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದೆ. ಸಮಾರಂಭವು ಬೆಳಗ್ಗೆ 10 ಗಂಟೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ನಡೆಯಲಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

 

ಶ್ರೀ ವಿಶ್ವೇಶ ತೀರ್ಥರಿಗೆ ಸಂತಾಪ ನಮನ: ಬ್ರಾಹ್ಮಣ ಸಭಾ ಆಯೋಜನೆ. ಪೇಜಾವರ ಪಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಸಂತಾಪ ನಮನ, ಉಪಸ್ಥಿತಿ: ರಾಮೋಹಳ್ಳಿಯ ಮಧ್ವರಾನಾಯಣಾಶ್ರಮದ ಶ್ರೀ ವಿಶ್ವಭೂಷಣತೀರ್ಥ ಸ್ವಾಮೀಜಿ, ಆಯುಕ್ತಾಶ್ರಮದ ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ, ಗಾಯತ್ರಿ ಮಂದಿರ, ಬ್ರಾಹ್ಮಣ ಸಭಾ ಆವರಣ, ಸಂಜೆ 5 ಗಂಟೆಗೆ ನಡೆಯಲಿದೆ.