ಖಾಸಗಿ ವಾಹಿನಿಗಳನ್ನು ಬದಿಗೊತ್ತಿ ಮತ್ತೇ ನಂಬರ್ ಒನ್ ಚಾನೆಲ್ ಆದ ಡಿಡಿ ನ್ಯಾಷನಲ್...ರಾಮಾಯಣ ಹಾಗೂ ಮಹಾಭಾರತದ ಮರುಪ್ರಸಾರವನ್ನು ಮೆಚ್ಚಿಕೊಂಡ ಜನ..
ಖಾಸಗಿ ವಾಹಿನಿಗಳ ಭರಾಟೆಯಲ್ಲಿ ತನ್ನ ಚಾರ್ಮ್ ಕಳೆದುಕೊಂಡಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿ ಮತ್ತೇ ತನ್ನ ಹಳೇ ಫಾರ್ಮ್ ಗೆ ಮರಳಿದೆ.ದೇಶದಲ್ಲಿ ಲಾಕ್ ಡೌನ್ ಹಿನ್ನಲೆ ಪ್ರೇಕ್ಷಕರ ಒತ್ತಾಯದ ಮೇರೆಗೆ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳನ್ನು ದೂರದರ್ಶನದಲ್ಲಿ ಮರುಪ್ರಸಾರ ಮಾಡಲಾಗುತ್ತಿದೆ.
ಒಂದು ಕಾಲದಲ್ಲಿ ದೇಶದ ಆತ್ಯಂದ ಜನಪ್ರಿಯ ಧಾರಾವಾಹಿಗಳಾಗಿದ್ದ ರಾಮಾಯಣ ಹಾಗೂ ಮಹಾಭಾರತ ಮರುಪ್ರಸಾರವನ್ನು ಜನ ಮೆಚ್ಚಿಕೊಂಡಿದ್ದು ಸದ್ಯ ಅತಿ ಹೆಚ್ಚಿನ ವೀಕ್ಷಣೆಯನ್ನು ಗಳಿಸುತ್ತಿದೆ. ಇದರಿಂದ ದೂರದರ್ಶನ ವಾಹಿನಿ ದೇಶದ ನಂಬರ್ 1 ಚಾನೆಲ್ ಆಗಿ ಹೊರಹೊಮ್ಮಿದೆ.
ಟಿವಿ ವಾಹಿನಿಗಳ ರೇಟಿಂಗ್ ತಿಳಿಸುವ ಬಾರ್ಕ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಏಪ್ರಿಲ್ 3 ಕ್ಕೆ ಮುಕ್ತಾಯವಾದ ವಾರದಲ್ಲಿ ದೂರದರ್ಶನಕ್ಕೆ ಅತಿ ಹೆಚ್ಚಿನ ಟಿಆರ್ ಪಿ ಬಂದಿದೆ. ಲಾಕ್ ಡೌನ್ ಅವಧಿಯಲ್ಲಿ ಜನ ಬೇಸರ ಕಳೆಯಲು ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಳೇ ಧಾರಾವಾಹಿಗಳನ್ನು ಹೆಚ್ಚಾಗಿ ವೀಕ್ಷೀಸುತ್ತಿದ್ದಾರೆ.