ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದೆ ಹೈಟೆಕ್ ವೇಶ್ಯಾವಾಟಿಕೆ
ಮಯಾನಗರಿ ಹೈ ಟೆಕ್ ವೈಶ್ಯವಾಟಿಕೆ ತಾಣವಾಗಿದೆ. ಸ್ಪಾ, ಪಾರ್ಲರ್, ಮತ್ತು ಲಾಡ್ಜಗೆ ಸೀಮಿತವಾಗಿದ್ದ ವೈಶ್ಯವಾಟಿಕೆ ಈಗ ಅಪಾರ್ಟ್‌ಮೆಂಟ್‌ನ ತನಕ ವಿಸ್ತಾರವಾಗಿದೆ. ಹೌದು ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗೂ ಸೀಳಿವು ಸಿಗದ ರೀತಿ ಹೈಟೆಕ್ ಆಗಿ ವೈಶ್ಯವಾಟಿಕೆ ದಂಧೆ ನಡೆಸುತ್ತಿದ್ದಾರೆ. ಇದರ ಜಾಡು ಹಿಡಿದ ಸಿಸಿಬಿ ಅಧಿಕಾರಿಗಳು ಮಂಗಳವಾರ ಬಾಣಸವಾಡಿಯ ಅಪಾರ್ಟಮೆಂಟ್ ಒಂದರ ಮೇಲೆ ದಾಳಿ ನಡೆಸಿ ಮೂವರು ಯುವತಿಯನ್ನು ರಕ್ಷಿಸಿದ್ದಾರೆ.
ಹೊರರಾಜ್ಯದ ಯುವತಿಯರನ್ನು ಬಳಸಿಕೊಡು ಖದೀಮರು ಈ ದಂಧೆಯನ್ನು ಅಪಾರ್ಟಮೆಂಟ್ ನಲ್ಲಿ ಐಷಾರಾಮಿಯಾಗಿ ನಡೆಸುತ್ತಿದ್ದಾರೆ. ಈ ಕೃತ್ಯದಲ್ಲಿ ಅಪಾರ್ಟ್‌ಮೆಂಟ್‌ನ ಮಾಲೀಕನೆ ಶಾಮಿಲಾಗಿದ್ದಾನೆ, ಸಿಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಒಬ್ಬ ಆರೋಪಿ ಬಲೆಗೆ ಬಿದ್ದಿದ್ದು. ಮನೆ ಮಾಲೀಕನ ಜೊತೆ ಉಳಿದ ಜನ ಕೊಡ ಪರಾರಿಯಾಗಿದ್ದಾರೆ. ಸದ್ಯ ಅವರ ಬಂಧನಕ್ಕೆ ಸಿಸಿಬಿ ಬಲೆ ಬಿಸಿದೆ.