ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿದ ಹೆಚ್. ಡಿ ಕುಮಾರಸ್ವಾಮಿ.

ಈ ಮೊದಲು "ನಿಖಿಲ್ ಎಲ್ಲಿದ್ದೀಯಪ್ಪಾ" ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಟ್ರೋಲ್ ವ್ಯಂಗ್ಯಕ್ಕೂ ಕರ್ಣವಾದಂತೆ. ಈಗ ಮಂಗಳೂರಿನಲ್ಲಿ ಆದಿತ್ಯ ರಾವ್ ಇಟ್ಟಿದ್ದು  ಬಾಂಬು ಅಲ್ಲ ಅದು ಮಿಣಿ ಮಿಣಿ ಪೌಡರ್ ಎಂಬ ಹೇಳಿಕೆಯೂ ಅಷ್ಟೇ ಟ್ರೋಲ್ ಮತ್ತು  ವ್ಯಂಗ್ಯಕ್ಕೆ ಕಾರಣವಾಗಿದೆ.ಯಾರದ್ದೇ  ವಾಟ್ಸಾಪ್ ನೋಡಲಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಮಿಣಿ ಮಿಣಿ ಪೌಡರ್ಯದ್ದೇ ಸುದ್ದಿ. ತಮ್ಮ ಮಿಣಿ ಮಿಣಿ ಹೇಳಿಕೆಗೆ ವ್ಯಕ್ತವಾಗುತ್ತಿರುವ ವ್ಯಂಗ್ಯಕ್ಕೆ ಕಾರಣವಾಗುತ್ತಿರುವ
ಹಿನ್ನಲೆ  ಹೆಚ್.ಡಿಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿ ಮಿಣಿ ಎನ್ನಲಾಗುತ್ತದೆ.ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನು ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿರುವುದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿಗರ ಅನುವಂಶವೇ ಪಾಕಿಸ್ತಾನದ್ದು ಹೀಗಾಗಿ ಅವರಿಗೆ ಕನ್ನಡದ ಪದಗಳು ತಾತ್ಸಾರ.ದೇಶದಲ್ಲಿ ಇಂದು ನೆಡೆಯುತ್ತಿರುವ ಕುಟಿಲ ರಾಜಕಾರಣ ಅದರ ಭಾಗವೇ ಕೊಂಕು,ಟ್ರೋಲ್ ಗಳು.ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರ ಮೂಲಕ ಹಾಸ್ಯ ಮಾಡುತ್ತಾರೆ ಎಂದು ಹೇಳಿದ್ದಾರೆ.