ಭಾರತ್ ಬಂದ್ , ಹಲವು ಸೇವೆಗಳ ಸ್ಥಗಿತ...?
ಬೆಂಗಳೂರು: ಕೇಂದ್ರ ಸರಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಲವು ಕಾರ್ಮಿಕ ಸಂಘಟನೆಗಳು ಮತ್ತು ಎಡಪಕ್ಷಗಳು ಬುಧವಾರ (ಜ.8) ಭಾರತ ಬಂದ್ಗೆ ಕರೆ ನೀಡಿದ್ದು, ಕೆಲವು ಸಂಘ-ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು ಬೆಂಬಲ ನೀಡಿದ್ದಾರೆ.
ಇನ್ನು, ಆ ದಿನದ ಪರಿಸ್ಥಿತಿ ಅವಲೋಕಿಸಿ, ಶಾಲಾ-ಕಾಲೇಜಿಗೆ ರಜೆ ನೀಡಲು ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗೆಳಿಗೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಆ ದಿನ ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿಲ್ಲ. ಸಾರಿಗೆ ಸೇವೆ, ಆರೋಗ್ಯ ಸೇವೆ ಹಾಗೂ ಅಂಗಡಿ-ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ಬಂದ್ ಪ್ರಭಾವದ ಮೇಲೆ ಹಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ.
ಯಾವೆಲ್ಲಾ ಸೇವೆಗಳು ಇರಲಿದೆ.
ಆ್ಯಪ್ ಆಧಾರಿತ ಕ್ಯಾಬ್‌ಗಳು, ಕೆಎಸ್ ಆರ್ ಟಿಸಿ, ಬಿಎಂಟಿಸಿ, ಹಾಲು, ಪೇಪರ್, ಆಟೋ ಸೇವೆಗಳು ದೊರೆಯಲಿವೆ. ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಮೆಡಿಕಲ್ ಸ್ಟೋರ್, ತುರ್ತುಸೇವೆ, ಹೋಟೆಲ್ ಸೇವೆ, ಶಾಲಾ-ಕಾಲೇಜು, ಮೆಟ್ರೋ ಸಂಚಾರ, ಎಟಿಎಂ ಸೇವೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ.
ಯಾವ ಸೇವೆಗಳ ಇರುವುದಿಲ್ಲ.
ಬ್ಯಾಂಕುಗಳು, ಎಲ್ ಐಸಿ ಕಚೇರಿ, ಸಹಕಾರಿ ಬ್ಯಾಂಕ್ಗಳು ಸಹ ಬಂದ್ ಆಗಿರುತ್ತವೆ. ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಾಸ ಉಂಟಾಗಲಿದೆ.