ಧರಣಿ ಮಂಡಲ ಮಧ್ಯದೊಳಗೆ

 ಗುಲ್ಟು ಖ್ಯಾತಿಯ ನವೀನ್ ಶಂಕರ್ ಅವರ ಮುಂದಿನ ಚಿತ್ರ ಯಾವ್ದು ಎಂಬ ಎಲ್ಲರ ಪ್ರೆಶ್ನೆಗೆ ತೆರೆ ಬಿದ್ದಿದೆ. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿರೋ ಶ್ರೀಧರ್ ಶಿಕಾರಿಪುರ ಅವರು ಈ ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತಿದ್ದು,  ಚಿತ್ರದಲ್ಲಿ ಒಬ್ಬರಿಗೊಬ್ಬರು ಪರಿಚಯವಿಲ್ಲದ ಒಂದಿಷ್ಟು ಪಾತ್ರಗಳ ನಡುವೆ ನಡೆಯುವ ರೋಚಕ ಕಥಾ ಹಂದರ ಹೊಂದಿದೆ.   ಚಿತ್ರಕತೆಯು ಹೈಪರ್ ಲಿಂಕ್ ಶೈಲಿಯಲ್ಲಿರುತ್ತದೆ, ಕ್ರೈಮ್, ಹಾಸ್ಯ, ದುಃಖ, ಪ್ರೀತಿ ಹೀಗೆ ಎಲ್ಲಾ ತರದ ಭಾವನೆಗಳ ಮೇಲೆ ಸಿನಿಮಾ ಸಾಗುತ್ತೆ ಎನ್ನುತ್ತಾರೆ ನಿರ್ದೇಶಕರು. 


ಓಂಕಾರ್  ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು,ವೀರೇಂದ್ರ ಕಂಚನ್,  ಪ್ರಶಾಂತ್ , ರಘು ಕುಂದರ್, ಶೇಷಪ್ಪ  ಅವರು ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.ಧರಣಿ ಮಂಡಲ ಮಧ್ಯೆದೊಳಗೆ ನಿಂತ ಡಾನ್ ಅಂಕಲ್ ಕೇವಲ ಒಂದೆ ಚಿತ್ರ ದಿಂದ ಪ್ರೇಕ್ಷಕರ ಮನದಲ್ಲಿ  ಕಾಯಂ ಸೀಟ್ ಹಿಡಿದಿಟ್ಟಿರುವ ಸಚ್ಚು ರವರು  ಟಗರು ಚಿತ್ರದ ನಂತರ ಮತ್ತೊಂದು ದೊಡ್ಡ ಚಿತ್ರದಲ್ಲಿ ಬೆಂಗಳೂರು ಅಂಡರ್ವರ್ಡ್ ನ ದೊಡ್ಡ ಡಾನ್ ಆಗಿ ಮಿಂಚಲಿದ್ದಾರೆ ಇಗಾಗಲೆ ಸೈಲೆಂಟ್ಆಗಿ ಮಾತಿನ ಭಾಗದ ಚಿತ್ರಿಕರಣ ಮುಗಿಸಿರುವ ಬಹು ಬರವಸೆಯ ಹೋಸಬರ ತಂಡ  ಬಹುತಾರಾಂಗಣ ಹೊಂದಿರುವ ವಿಷಯ ಹೊರಬಿದ್ದಿದೆ  ಟಗರು ನಂತರ ಮತ್ತೊಮ್ಮೆ ಕಮಾಲ್ ಮಾಡಲು ಬರುತಿದ್ದಾರೆ ಡಾನ್ ಅಂಕಲ್  ಸಚ್ಚು 

ಈಗಾಗಲೆ ಕೆಲವು ಚಿತ್ರದ ತುಣುಕುಗಳನ್ನು  ಹಂಚಿಕೊಂಡಿರುವ ಚಿತ್ರತಂಡವು ತನ್ನ ಒಂದೆ ಪೋಸ್ಟರ್ ನಿಂದ ಗಾಂಧಿನಗರದಲ್ಲಿ ಹೊಸ ಅಲೆಯನ್ನು ಅಬ್ಬಿಸಿದೆ ಡಾನ್ ಅಂಕಲ್ ಆಗಿ ಮಿಂಚಿದ್ದ ಸಚ್ಚು ಅವರು ಧರಣಿಮಂಡಲದಲ್ಲಿ ಯಾವ ಕಮಾಲ್ ಮಾಡುತ್ತಾರೆ ಕಾದು ನೋಡಬೆಕಾಗಿದೆ.

ತಾಂತ್ರಿಕ ವರ್ಗ 
ನಿರ್ದೇಶಕ : ಶ್ರೀಧರ್ ಶಿಕಾರಿಪುರ ( Sridhar Shikaripura
ನಿರ್ಮಾಣ : ಬಾಕ್ಸ್ ಆಫಿಸ್ ಸಿನಿ ಕ್ರಿಯೇಷನ್ಸ್ 
ಛಾಯಾಗ್ರಹಣ : ಕೀರ್ತನ್ ಪೂಜಾರಿ (Keertan Poojary)
ಸಂಗೀತ : ರೋಣದ ಬಕ್ಕೇಶ್ & ಕಾರ್ತಿಕ್ ಚೆನ್ನೊಜಿರಾವ್ (Ronada Bakkesh & Karthik Chennojirao)
ಸಂಕಲನ : ಉಜ್ವಲ್ ಗೌಡ (Ujwal Gowda)