ಭಾರತ ತಂಡಕ್ಕೆ ಲೋವರ್ ಆರ್ಡರ್ ಕಂಟಕ...!
ಭಾರತ ತಂಡಕ್ಕೆ ಲೋವರ್ ಆರ್ಡರ್ ಕಂಟಕ....!
ಭಾರತ ತಂಡ ಉತ್ತಮ ಓಪನರ್ ಗಳ ಜೊತೆ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಆದರೆ ಲೋವರ್ ಆರ್ಡರ್ ಸಮಸ್ಯೆ ಈಗ ಎದುರಾಗಿದ್ದು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಎಂಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಟೀಮ್ ಇಂಡಿಯಾಕ್ಕೆ ದೊಡ್ಡಮಟ್ಟದಲ್ಲಿ ತೊಂದರೆಯಾಗಿ ಗೋಚರಿಸುತ್ತಿದೆ.
ಭಾರತದ ಲೋವರ್ ಆರ್ಡರ್ ನಲ್ಲಿ ಅನುಭವಿ ಆಟಗಾರರು ಇಲ್ಲದಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ. ಮಧ್ಯಮ ಕ್ರಮಾಂಕ ವೈಫಲ್ಯ ಅನುಭವಿಸಿದರೆ ಅಥವಾ ಪಂದ್ಯವನ್ನು ಫಿನಿಶಿಂಗ್ ಮಾಡುವ ಜವಾಬ್ದಾರಿ 6 ಮತ್ತು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಧೋನಿ ಮತ್ತು ಪಾಂಡ್ಯ ವಹಿಸಿ ಕೊಳ್ಳುತ್ತಿದ್ದರು ಎಂಬುದು ಮರೆಯುವಂತಿಲ್ಲ.
2019 ಜನವರಿ ಬಳಿಕ ಆರನೇ ಕ್ರಮಾಂಕದಲ್ಲಿ ಹಾಗೂ ನಂತರ ಬಂದ ಬ್ಯಾಟ್ಸ್ ಮನ್ ಗಳ ಆಟವನ್ನು ಗಮನಿಸಿದರೆ ಭಾರತ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಉದಾಹರಣೆಗೆ ಭಾರತ 32 ಓವರ್ ಗಳಲ್ಲಿ ಗಳಲ್ಲಿ 220 ರನ್ ಕಲೆಹಾಕಿದ್ದಾರೆ, ನಂತರ ಬರುವ ಬ್ಯಾಟ್ಸ್ ಮನ್ ಗಳು ತಂಡದ ಮೊತ್ತವನ್ನು 300 ಗಡಿ ದಾಟಿಸಲು ಪರದಾಡುವಂತಹ ಪರಿಸ್ಥಿತಿ ಭಾರತ ತಂಡದಲ್ಲಿದೆ.
ಸದ್ಯ ಲೋವರ್ ಆರ್ಡರ್ ನಲ್ಲಿ ಭಾರತ ಪರ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ ಬ್ಯಾಟ್ ಬೀಸುತ್ತಿದ್ದಾರೆ. ಜಡೇಜಾ ಕೆಲವು ಪಂದ್ಯಗಳಲ್ಲಿ ಮಾತ್ರ ಅಬ್ಬರಿಸುತ್ತಿದ್ದಾರಷ್ಟೆ. ಹೀಗಾಗಿ ಸದ್ಯ ಟೀಮ್ ಇಂಡಿಯಾದ ಲೋವರ್ ಆರ್ಡರ್ ಸಮಸ್ಯೆಗೆ ಸೂಕ್ತ ಅನುಭವಿ ಆಟಗಾರ ಅವಶ್ಯಕತೆ ಭಾರತ ತಂಡಕ್ಕಿದೆ.