ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ
ರಾಜ್ಯದಲ್ಲಿ ಎರಡು ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯವಾಗಿದ್ದು ರಾಜ್ಯದ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಎಲ್ಲರ ಎದೆಯಲ್ಲೂ ಢವ ಢವ ಶುರುವಾಗಿದೆ.
ಚುನಾವಣೆಗೂ ಮುನ್ನ ಕೆಲವರು ಮತ ಪಡೆಯಲು ಹಣ, ಹೆಂಡದ ಜೊತೆ ಇನ್ನಿತರ ಆಮಿಷ ಒಡ್ಡಿ ಮತದಾರರನ್ನು ತಮ್ಮತ ಸೆಳೆದುಕೊಳ್ಳಲು ಪ್ರಯತ್ನ ನಡೆಸಿದ್ದರು ಎಂಬ ಸುದ್ದಿ ಕೇಳಿಬಂದಿದ್ದವು.
ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ ಗೋವಾ, ಉಡುಪಿ, ಮತ್ತಿತರ ಕಡೆ ದುಡಿಯಲು ಹೋದ ಬಡ ಕಾರ್ಮಿಕರನ್ನು ಮತಕ್ಕಾಗಿ ಅಭ್ಯರ್ಥಿಗಳು ತಮ್ಮ ಸ್ವಂತ ಹಣ ಕೊಟ್ಟು ವಾಹನ ಬಾಡಿಗೆ ಪಾವತಿಸಿ, ಅವರನ್ನು ಹಳ್ಳಿಗೆ ತರಸಿಕೋಂಡು ಅವರು ತಮ್ಮ ಪರ ಮತ ಹಾಕುವಂತೆ ನೋಡಿಕೊಂಡಿದ್ದರು ಇದರ ಫಲವಾಗಿ ಎಲ್ಲಾ ಚುನಾವಣೆಗಿಂತಲೂ ಈ ಬಾರಿಯೂ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಕಾರಣವಾಗಿತು.
ರಾಜ್ಯದ ವಿವಿಧ ಗ್ರಾಮಗಳ ಅಂಗಡಿ, ಹೋಟಿಲ್, ಶಾಲೆಗಳ ಆವರಣ, ಬಸ್ ಸ್ಟ್ಯಾಂಡ್, ದೇವಸ್ಥಾನಗಳ ಬಳಿ ಜನರು ತಮ್ಮೂರಿನ ಯಾರೆಲ್ಲ ಪಂಚಾಯತ ಕಣದಲ್ಲಿ ಗೆದ್ದು ಬರಬಹುದು, ಯಾರಿಗೆ ಸೋಲು ಖಚಿತ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೇ ಯಾವ ಪಕ್ಷದ ಬೆಂಬಲಿತರು ಅಧಿಕಾರಕ್ಕೆ ಬರಬಹುದು. ಎಷ್ಟು ಮತ ಪಡೆಯಬಹುದು. ಎಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇನ್ನೂ ಸ್ಪರ್ಧೆ ಮಾಡಿದ ಅಭ್ಯರ್ಥಿಗಳು ಯಾರು ನನಗೆ ಮತ ನೀಡಿರಬಹುದು. ಕೊನೆ ಕ್ಷಣಕ್ಕೆ ಯಾರು ನಮಗೆ ಕೈಕೊಟ್ಟಿರಬಹುದು. ಎಂಬ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದಾರೆ. ಖರ್ಚು ಮಾಡಿರುವ ಹಣದ ಬಗ್ಗೆಯೂ ಕೆಲವರೂ ಚಿಂತಿಸಿ ಗೆಲುವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಗ್ರಾಮ ಪಂಚಾಯತ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿವರೆಗ್ಗೆ ಕೃಷಿ ಚಟುವಟಿಕೆ, ಕೂಲಿ ಕೆಲಸ ಬಿಟ್ಟು ಅಭ್ಯರ್ಥಿಗಳು ನೀಡುತ್ತಿದ್ದ ಮದ್ಯ, ಕೋಳಿ ಮಾಂಸದ ಆಮಿಷಕ್ಕೆ ಒಳಗಾಗಿದ್ದ ಕೆಲ ಮತದಾರರು ಈಗ ತಮ್ಮ ಹೊಲಗಳತ್ತ ಮುಖ ಮಾಡುತ್ತಿದ್ದು. ನಗರ ಪ್ರದೇಶಗಳಿಂದ ಮತದಾನ ಮಾಡಲು ಬಂದವರು ಮರುಳುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಡಿಸೆಂಬರ್ 30 ಕ್ಕೆ ಹೊರ ಬರಲಿದ್ದು. ಚುನಾವಣೆಯಲ್ಲಿ ಯಾರು ಗೆಲ್ಲತ್ತಾರೆ, ಯಾರು ಸೋಲುತ್ತಾರೆ, ಎಂದು ಜನರಲ್ಲಿ ಕುತೂಹಲ ಮೂಡಿದೆ.
ವರದಿ:ಬಸವರಾಜ ಕುಂಬಾರ