ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಘೋಷಣೆ ನೀಡಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ,18 ಕೋಟಿ ಹಣವನ್ನು ಶುಕ್ರವಾರದಂದು ಬಿಡುಗಡೆ ಮಾಡಿದ್ದು, ಇದರಿಂದ ಸುಮಾರು 9 ಕೋಟಿಯ ರೈತರ ಪರಿವಾರಕ್ಕೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ 7 ಪ್ರತ್ಯೇಕವಾದ ರಾಜ್ಯದ ರೈತರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮೋದಿ ಮಾತು ಕಥೆಯನ್ನು ನಡೆಸಿದ್ದಾರೆ.

ಪಿಎಂ ಕಿಸಾನ್ ಯೋಜನೆಯಿಂದಾಗಿ ಅನ್ನದಾತರಿಗೆ ಆರ್ಥಿಕವಾಗಿ ಉಪಯೋಗವಾಗುತ್ತಿದೆ. ಪ್ರತಿ ವರ್ಷ 6000 ಮೊತ್ತದ ಹಣವು ಫಲಾನುಭವಕ್ಕೆ ಅರ್ಹ ರೈತರಿಗೆ ಸರ್ಕಾರದ ವತಿಯಿಂದ ಲಭ್ಯವಾಗುತ್ತಿದ್ದು, ಸರಿ ಸಮಾನವಾಗಿ  2000 ರೂಪಾಯಿಗಳನ್ನು ನಾಲ್ಕು ತಿಂಗಳ ಕಂತಿನಲ್ಲಿ ಕಟ್ಟಬೇಕಿದೆ. ಯೋಜನೆಯ ನಿಧಿ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗುತ್ತದೆ.



ಕೇಂದ್ರ ಸಚಿವರು, ಎಂಪಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ರೈತರ ಜೊತೆ ಮೋದಿ ನಡೆಸುವ ಮಾತು ಕಥೆಗೆ ಸಾಕ್ಷಿಯಾಗಿದ್ದರು. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ, ನರೇಂದ್ರ ಮೋದಿ ನೇಗಿಲ ಯೋಗಿಗಳ ಹತ್ತಿರ ಸಂವಾದ ಮಾಡಲಿದ್ದಾರೆ.