ಪ್ಯಾನ್ ನೀಡದಿದ್ದಾರೆ ಸಂಬಳದಲ್ಲಿ 20% ಕಟ್

2.5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ನೌಕರರು ಕಡ್ಡಾಯವಾಗಿ ತಮ್ಮ ಕಂಪನಿಗೆ ಪ್ಯಾನ್ ಅಥವಾ ಆಧಾರ್ ಕಾರ್ಡ್ ನ್ನು ಸಲ್ಲಿಸಬೇಕು ಎಂದು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಒಂದು ವೇಳೆ ಸಲ್ಲಿಸದೆ ಇದ್ದಲ್ಲಿ ಅವರ ಸಂಬಳದ 20% ನ್ನು ತೆರಿಗೆ ರೂಪದಲ್ಲಿ ಕಡಿತಗೊಳಿಸುತ್ತಾರೆ. ಈ ನಿಯಮ ಜನವರಿ 16 ರಂದು ಅನುಷ್ಠಾನಕ್ಕೆ ಬಂದಿದೆ.

ಉದ್ಯೋಗಿಗಳು ಗಳಿಸುವ ಆದಾಯ ಮತ್ತು ಅವರ ತೆರಿಗೆ ಕಡಿತದ ಮೇಲೆ ನಿಗಾ ಇಡಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸರ್ಕಾರದ ಕಣ್ಣ ತಪ್ಪಿಸುವ ತೆರಿಗೆ ವಂಚಕರಿಗೆ ದೊಡ್ಡ ಹೊಡೆತ ಬಿದ್ದಿದೆ.