ಬೇಟೆಗಾರರಿಬ್ಬರ ಮೇಲೆ ಎಫ್.ಐ.ಆರ್ ದಾಖಲು
ಆಲ್ಮಾ ನ್ಯೂಸ್24/ಧ್ರುವರಾಜ್ ಜೈನ್
ತೀರ್ಥಹಳ್ಳಿ: ಕಾಡುಪ್ರಾಣಿಗಳನ್ನು ಬಂದೂಕಿನಿಂದ ಬೇಟೆಯಾಡುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ.
ತಾಲ್ಲೂಕಿನ ಆಗುಂಬೆ ಗ್ರಾಮದ ಸುತ್ತ ಮುತ್ತ ಬೇಟೆಯಾಡುತ್ತಿದ್ದ ರೋಹಿತ್ ಹೆಗಡೆ ಮತ್ತು ಬಿಳಚಿಕಟ್ಟೆ ಮಹಾಬಲೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋಮೇಶ್ವರ ಅಭಯಾರಣ್ಯದಲ್ಲಿ ಇಬ್ಬರು ಬೇಟೆಯಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಕೂಡಲೆ ಇಬ್ಬರು ಪರಾರಿಯಾಗಿದ್ದಾರೆ.