ಶ್ರೀ ರಾಮನ ಆದರ್ಶಗಳನ್ನು ಪ್ರಸ್ತುತ ಪಡಿಸಲಿರುವ ಶ್ರೀ ರಾಮಾ ಯಾನ ಕುರಿತ ನೃತ್ಯರೂಪಕ.
ಬೆಂಗಳೂರು: ನಗರದ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಪ್ರಖ್ಯಾತ ಸಂಗೀತಗಾರ್ತಿ ಪಿ ರಾಮಾ ಫೆಬ್ರವರಿ 4 ಮಂಗಳವಾರದಂದು ಶ್ರೀರಾಮನ ಭಕ್ತೆ ಹೆಸರಾಂತ ಸಂಗೀತಗಾರ್ತಿ ಬೆಂಗಳೂರು ನಾಗರತ್ನಮ್ಮನವರ ಜೀವನದ ಸತ್ಯ ಕಥೆಯನ್ನಾಧರಿಸಿದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಇದರ ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನವನ್ನು ಟಿ ಎಸ್ ನಾಗಾಭರಣ ಅವರದ್ದಾಗಿದೆ ಎಂದು ಹೇಳಿದರು.
ಶ್ರೀ ರಾಮನ ಆದರ್ಶಗಳನ್ನು ಪ್ರಸ್ತುತ ಪಡಿಸಲಿರುವ ಶ್ರೀ ರಾಮಾ ಯಾನ ಕುರಿತ ನೃತ್ಯರೂಪಕವನ್ನು ಇದೇ ಫೆಬ್ರವರಿ ಮೂರು ನಾಲ್ಕು ಮತ್ತು ಐದನೇ ತಾರೀಖಿನಂದು ಮೂರು ದಿನಗಳ ಕಾಲ ಸಂಗೀತ ಸಂಭ್ರಮ ಟ್ರಸ್ಟ್ ವತಿಯಿಂದ ನಮ್ಮ ಪವಿತ್ರ ಗ್ರಂಥ ರಾಮಾಯಣಕ್ಕೆ ಸಂಬಂಧಿಸಿದಂತೆ ವಿವಿಧ ಕಲಾಪ್ರಕಾರಗಳ ಉತ್ಸವವನ್ನು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದಾರೆ. ಪ್ರಸ್ತುತ ನಮ್ಮ ಕಲೆ ಮತ್ತು ಸಂಸ್ಕೃತಿಯ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಬಹಳ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ನಡೆಸಿಕೊಡಲ್ಲಿದ್ದು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಎಲ್ ಸಂತೋಷ ಅವರು ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.