ರಾಜ್ಯಕ್ಕೆ ಬರುತ್ತಿರುವ ಅಮಿತ್‌ ಶಾ; ಸಿ.ಎಂ ಮನೆಯತ್ತ ಸಾಗುತ್ತಿರುವ ಸಚಿವಕಾಂಕ್ಷಿಗಳು

ಬಹಳ ದಿನದಿಂದ ಕುಂಟುತ್ತ ಸಾಗುತ್ತಿದ್ದ ಸಚಿವ ಸಂಪುತ ವಿಸ್ತರಣೆ ವಿಚಾರ ನಾಳೆ ಪೈನಲ್‌ ಆಗುವ ಸಾದ್ಯತೆ ಇದೆ. ಬಿಜೆಪಿ ಹೈಕಮಾಂಡ್‌ ಅಮಿತ್‌ ಶಾ ನಾಳೆ ರಾಜ್ಯಕ್ಕೆ ಆಗವಿಸುತ್ತಿರವ ಹಿನ್ನೆಲೆ ಈ ವಿಚಾರದ ಬಗ್ಗೆ ಮಾತುಕತೆ ನಡೆಸಲು ಸಿಎಂ ಯಡಿಯೂರಪ್ಪ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲೆ ಸಿಎಂ ನಿವಾಸಕ್ಕೆ ಸಚಿವಕಾಂಕ್ಷಿಗಳ ದಂಡೇ ದೌಡಾಯಿಸಿದ್ದು, ತಮಗೂ ಮಂತ್ರಿ ಸ್ಥಾನ ನೀಡವ ಬೇಡಿಕೆ ಇಟ್ಟಿದ್ದಾರೆ,

ಪಕ್ಷದ ಶಾಸಕರಾದ ಉಮೇಶ್ ಕತ್ರಿ, ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಅರಗ ಜ್ಞಾನೇಂದ್ರ ಮುಂತಾದವರು ಸಿಎಂ ಬಿಎಸ್ವೈ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಮುಂದಿಟ್ಟರು. ವಲಸಿಗರಾದ ಶಾಸಕ ಗೋಪಾಲಯ್ಯ, ಎಂಟಿಬಿ ನಾಗರಾಜ್, ಆರ್ ಶಂಕರ್ ಸಹ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದರು. ಉಳಿದ ಆಕಾಂಕ್ಷಿಗಳು ಸಹ ಇಂದು ಸಿಎಂ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.