ಐಪಿಎಲ್ ಹರಾಜ್ : ಟಾಪ್ ಲಿಸ್ಟ್ ನಲ್ಲಿ ಹರ್ಭಜನ್, ಕೆಧಾರ್

ಐಪಿಎಲ್ ಹವಾ ಇನ್ನೇನು ಮತ್ತೆ ಪ್ರಾರಂಭವಾಗಲಿದೆ. ಈ ಬಾರಿ ಐಪಿಎಲ್ ಹರಾಜಿನ ಪ್ರಕ್ರಿಯೆಯಲ್ಲಿ ಭಾರತದ 164 ಆಟಗಾರರ ಹೆಸರು ಹರಾಜಿನ ವೇಳಾಪಟ್ಟಿಯಲ್ಲಿದ್ದರೆ, ಹೊರ ದೇಶದ 125 ಆಟಗಾರರ ಹೆಸರು ಪಟ್ಟಿಗೆ ಸೇರ್ಪಡೆಯಾಗಿವೆ. ಇನ್ನುಳಿದಂತೆ ಸಂಯೋಜಿತ ರಾಷ್ಟ್ರಗಳ ಆಟಗಾರರ ಸಂಖ್ಯೆ 3 ಕ್ಕೆ ನಿಂತಿದೆ. 

ಆಟಗಾರರ ವೇಳಾಪಟ್ಟಿ ಬಹಿರಂಗ 

ಈ ವರ್ಷದ ಐಪಿಎಲ್ ಹರಾಜಿನ ಚಟುವಟಿಕೆ ಫೆಬ್ರವರಿ 18 ರಂದು ಚೆನ್ನೈ ನಲ್ಲಿ ನಡೆಯಲಿದ್ದು, ಅತಿ ಹೆಚ್ಚು ಬೇಸ್ ಲೆವೆಲ್ ಮೊತ್ತವಾದ 2 ಕೋಟಿಗೆ ಸೀನಿಯರ್ ದೂಸ್ರಾ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮೆನ್ ಕೆಧಾರ್ ಜಾಧವ್ ಸೇರಿದಂತೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿಥ್, ಗ್ಲೆನ್ ಮ್ಯಾಕ್ಸ್ವೆಲ್ ಸೇಲ್ ಆಗಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ 8 ತಂಡಗಳು ಭಾಗವಹಿಸಲಿದ್ದು, ಒಟ್ಟಾರೆ 292 ಆಟಗಾರರು ತಮ್ಮ ತಂಡವನ್ನು ಪ್ರತಿನಿಧಿಸಲಿದ್ದಾರೆ. ಒಂದೊಂದು ತಂಡಕ್ಕೆ ಪ್ರೇತ್ಯೇಕವಾಗಿ 61 ಸ್ಥಾನ ದೊರೆಯಲಿದೆ. ಐಪಿಎಲ್ ಗವರ್ನಿಂಗ್ ಕೌನ್ಸಿಲ್ ನವರು ಆಟಗಾರರ ವೇಳಾಪಟ್ಟಿಯನ್ನು ಬಹಿರಂಗ ಪಡಿಸಿದ್ದಾರೆ.

ಭಜ್ಜಿ, ಕೆಧಾರ್ ಚೆನ್ನೈ ಗೆ ಸೇಲ್

ರಾಯಲ್ ಚಾಲೆಂಜೆರ್ಸ್ ಬೆಂಗಳೂರಿಗೆ 13  ಸ್ಥಾನ ಖಾಲಿ ಇದ್ದರೇ, ಹೈದೆರಾಬಾದ್ ಗೆ ಕೇವಲ 3 ಸ್ಥಾನಗಳು ಖಾಲಿ ಇವೆ. ಪಂಜಾಬ್ ತಂಡದ ಮಾಲೀಕರು 53 ಕೋಟಿ ಮೊತ್ತವನ್ನು ಐಪಿಎಲ್ ಹರಾಜಿನ ಪ್ರಕ್ರಿಯೆಯಲ್ಲಿ ಹಾಜರಾಗುತ್ತಿದ್ದು, ಹೈದೆರಾಬಾದ್ 10 .75 ಕೋಟಿ, ಚೆನ್ನೈ 22 .7  ಕೋಟಿ ಮೊತ್ತದೊಂದಿಗೆ ತಮ್ಮ ಟೀಮ್ ಬಿಡ್ ಮಾಡಲು ಬರುತ್ತಿದ್ದಾರೆ. ಇನ್ನು ಚೆನ್ನೈ 7 ಸ್ಥಾನವನ್ನು ಭರಿಸಬೇಕಾಗಿದ್ದು, ಹರ್ಭಜನ್ ಸಿಂಗ್ ಹಾಗೂ ಕೇಧರ್ ಜಾಧವ್ ನ  ಸೂಪರ್ ಕಿಂಗ್ಸ್ ಓನರ್ ಬಿಡುಗಡೆ ಮಾಡಿದ್ದಾರೆ. 

ಐಪಿಎಲ್ ಕಣಕ್ಕೆ ಸಚಿನ್ ತೆಂಡೂಲ್ಕರ್ ಪುತ್ರ 

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸಹ ಈ ವರ್ಷ ಐಪಿಎಲ್ ನಲ್ಲಿ ಆಡಲಿದ್ದು, 20 ಲಕ್ಷದ ಹರಾಜಿನ ವಿಭಾಗದಲ್ಲಿದ್ದಾರೆ ಎಡಗೈ ಫಾಸ್ಟ್ ಬೌಲರ್. ಮ್ಯಾಕ್ಸ್ವೆಲ್, ಸ್ಮಿಥ್ ಹೊರತು ಪಡಿಸಿ ಬೇಸ್ ಪ್ರೈಸ್ ಅಡಿಯಲ್ಲಿ ಶಕಿಹ್ಬ್ ಅಲ್ ಹಾಸನ್, ಮೊಯೆನ್ ಅಲಿ, ಜಾಸನ್ ರಾಯ್, ಮಾರ್ಕ್ಸ್ ವುಡ್ ಆಟಗಾರರ ಹೆಸರು ಸೇರಿಕೊಂಡಿವೆ. 

ಬರಹ: ಹೆಚ್. ಶ್ರೀ ಹರ್ಷ