ಲವ್ ಜಿಹಾದ್ ಕಾಯ್ದೆ ಅಡಿ 23 ದಿನಗಳಲ್ಲಿ 23 ಪ್ರಕರಣಗಳು ದಾಖಲು..!
ಭೋಪಾಲ್: ಮಧ್ಯಪ್ರದೇಶ ಸರಕಾರ ಹೊರಡಿಸಿದ್ದ ‘Freedom of religion ordinance; 2020 ಕಾಯ್ದೆ ಅಡಿಯಲ್ಲಿ ಮೊದಲ ತಿಂಗಳಲ್ಲೇ ಸರಾಸರಿ ದಿನಕ್ಕೋಂದು ಪ್ರಕರಣದಂತೆ ಒಟ್ಟು 23 ಪ್ರಕರಣಗಳು ದಾಖಲಾಗಿವೆ.ಸಾಮಾನ್ಯವಾಗಿ ಈ ಕಾಯ್ದೆಯನ್ನು ಲವ್ ಜಿಹಾದ್ ಕಾಯ್ದೆ ಎಂದು ಕರೆಯಲಾಗುತ್ತಿದೆ. ಈ ಕಾಯ್ದೆಯು ಜನವರಿ 9 ರಂದು ಜಾರಿಗೆ ಬಂದಿತ್ತು.
ಬೋಪಾಲ್ವೊಂದರಲ್ಲೇ 7 ಪ್ರಕರಣಗಳು ದಾಖಲಾಗಿದ್ದು, ಇಂದೋರ್ನಲ್ಲಿ 5, ಜಬಲ್ಪುರ್ ಮತ್ತು ರೆವಾದಲ್ಲಿ ತಲಾ 4 ಮತ್ತು ಗ್ವಾಲಿಯರ್ನಲ್ಲಿ 3 ಪ್ರಕರಣಗಳು ದಾಖಲಾಗಿವೆ. ಈ ಘಟನೆಗಳನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಇಂತಹ ಕೃತ್ಯಗಳು ದೇಶಾದ್ಯಂತ ನಡೆಯುತ್ತಿವೆ ಎಂದು ಮಧ್ಯಪ್ರದೇಶದ ಗೃಹ ಮಂತ್ರಿ ನಾರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಈ ಹೊಸ ಕಾಯ್ದೆ ಅಡಿಯಲ್ಲಿ ಬರವಾಣಿ ಜಿಲ್ಲೆಯ ಪಾಲಸುದ್ ಪೋಲಿಸ್ ಠಾಣೆಯಲ್ಲಿ ಜನವರಿ 17ರಂದು ಮೊದಲ ಪ್ರಕರಣ ದಾಖಲಾಗಿತ್ತು. ಸೊಹೆಲ್ ಮಾನ್ಸಿರಿ ಅಲಿಯಾಸ್ ಸನ್ನಿ ಎಂಬ ವಿವಾಹಿತ ವ್ಯಕ್ತಿಯೊಬ್ಬ ತನ್ನ ಅಸಲಿ ಹೆಸರನ್ನು ಮುಚ್ಚಿಟ್ಟು ಬೇರೆ ಸಮುದಾಯದ ಹುಡುಗಿಯನ್ನು ನಾಲ್ಕು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದಾದ ಮೂರು ದಿನಗಳ ನಂತರ ರಾಜ್ಯದಲ್ಲಿ ಮೊದಲ ಲವ್ ಜಿಹಾದ್ ಪ್ರಕರಣ ದಾಖಲಾಗಿತ್ತು ಮತ್ತು ನಂತರದ 11 ದಿನಗಳಲ್ಲಿ ಮತ್ತೆ 6 ಪ್ರಕರಣಗಳ ದಾಖಲಾಗಿದ್ದವು.
ಖಾರ್ಗೋಣೆ ಜಿಲ್ಲೆಯ ಮಂಡ್ಲೆಶ್ವರನಲ್ಲಿನ 21 ವರ್ಷದ ಹುಡುಗಿಯೊಬ್ಬಳು, ಸಾಹಿಲ್ ಖುರೇಷಿ ಎಂಬ ವ್ಯಕ್ತಿ ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡಿದ್ದ. ಆದರೆ ಅವನ ನಿಜ ಬಣ್ಣ ಬಯಲಾದಾಗ ತನ್ನನ್ನು ಮತಾಂತರ ಆಗುವಂತೆ ಒತ್ತಾಯಿಸಿದ್ದ ಎಂದು ದೂರು ದಾಖಲಿಸಿದ್ದಾಳೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಸಾಹಿಲ್ಗೆ ಜಾಮೀನು ಸಿಕ್ಕಿದೆ. ದಾಖಲಾದಂತಹ ಪ್ರಕರಣಗಳಲ್ಲಿ ಅತಿ ಹೆಚ್ಚೆ ದೂರುಗಳನ್ನು ಮಹಿಳೆಯರೇ ನೀಡಿದ್ದು, ಪ್ರೇಮದಲ್ಲಿ ಮೋಸ ಮತ್ತು ಬಲವಂತದ ಮತಾಂತರದ ಆರೋಪಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಧ್ಯಪ್ರದೇಶ ಸರಕಾರ ಹೊರಡಿಸಿರುವ ಈ ಸುಗ್ರೀವಾಜ್ಞೇಗೆ ಗರಿಷ್ಟ ಆರು ತಿಂಗಳ ಒಳಗಡೆ ವಿಧಾನಸಭೆಯಲ್ಲಿ ಸಮ್ಮತಿ ಸಿಗಬೇಕಿದೆ. ಈ ಕಾಯ್ದೆ ಅಡಿ 1 ರಿಂದ 5 ವರ್ಷದ ತನಕ ಜೈಲುವಾಸ ಮತ್ತು ಕನಿಷ್ಟ 25,000 ದಂಡ ವಿಧಿಸಬಹುದು. ನೊಂದ ವ್ಯಕ್ತಿಯ ಪರವಾಗಿ ಕೇವಲ ಅವರ ಸಂಬಂಧಿಕರು ಅಥವಾ ಸಹೋದರ-ಸಹೋದರಿಯರು ಎಫ್ಐಆರ್ಅನ್ನು ದಾಖಲಿಸಬಹುದು. ಇದರ ಹೊರತಾಗಿ ಬೇರೆಯವರಿಂದ ಬಂದ ದೂರೂಗಳಿಗೆ ನೇರವಾಗಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ಮಂಜುನಾಥ್ ಅಜಿತ್